ನವದೆಹಲಿ (ಪಿಟಿಐ): ಭಾರತದ ಕುಸ್ತಿ ತಾರೆ ವಿನೇಶ್ ಫೋಗಟ್ ಅವರು ಸ್ಪರ್ಧೆಯಿರದ ವೇಳೆ ನಡೆಸಲಾಗುವ ಡೋಪಿಂಗ್ ಪರೀಕ್ಷೆ ತಪ್ಪಿಸಿಕೊಂಡಿದ್ದು, 12 ತಿಂಗಳಲ್ಲಿ ಮೊದಲ ಬಾರಿ ಅವರು ‘ವಾಸಸ್ಥಳದ ಮಾಹಿತಿ’ (ವೇರಬೌಟ್ಸ್) ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಇಂಟರ್ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ (ಐಟಿಎ) ನೋಟಿಸ್ ನೀಡಿದೆ.

2025ರ ಡಿ. 18ರಂದು ಸಿಬ್ಬಂದಿ ಪರೀಕ್ಷೆಗೆ ಬಂದಾಗ ತಾವು ಇರುವ ಸ್ಥಳದ ಬಗ್ಗೆ ವಿನೇಶ್ ಪರೀಕ್ಷಾ ಅಧಿಕಾರಿ ಗಳಿಗೆ ನೀಡಿರಲಿಲ್ಲ. ಮೇ 4ರಂದು ಹೊರಡಿಸಲಾದ ನೋಟಿಸ್ನಲ್ಲಿ ಐಟಿಎ, ಈ ಅಂಶ ಉಲ್ಲೇಖಿಸಲಾಗಿದೆ.

ಐಟಿಎ, ವಿಶ್ವ ಉದ್ದೀಪನಮದ್ದುಸೇವನೆ ತಡೆ ಏಜನ್ಸಿ (ವಾಡಾ)ದ ಕಾರ್ಯ ನಿರ್ವಹಣೆಯಲ್ಲಿ ಪಾಲುದಾರ ಆಗಿದೆ. ಪರೀಕ್ಷೆ ತಪ್ಪಿಸಿಕೊಂಡಿದ್ದಕ್ಕೆ ಐಟಿಎ ವಿನೇಶ್ ಅವರಿಂದ ಜನವರಿ 5ರಂದು ಪ್ರತಿಕ್ರಿಯೆ ಕೇಳಿತ್ತು. ಅವರು ಜನವರಿ 19ರಂದು ವಿವರಣೆ ನೀಡಿದ್ದರು.

ಇದು ಡೋಪಿಂಗ್ ಉಲ್ಲಂಘನೆಗೆ ಸಂಬಂಧಿಸಿದ ನೋಟಿಸ್ ಆಗಿಲ್ಲ. ಆದರೆ ವಾಸ್ತವ್ಯ ಸ್ಥಳ ಮಾಹಿತಿ ತಿಳಿಸದ್ದಕ್ಕೆ ನೀಡಿದ ಎಚ್ಚರಿಕೆಯಾಗಿದೆ. ದಿಢೀರ್ ಆಗಿ ಮಾದರಿ ಪಡೆಯಲು ಮುಂದಾಗುವಾಗ ಕ್ರೀಡಾಪಟುಗಳು ವಾಸ್ತವ್ಯಸ್ಥಳದ ಮಾಹಿತಿ ನೀಡಬೇ ಕೆಂಬುದನ್ನುಮನವರಿಕೆ ಮಾಡುವ ಯತ್ನವೂ ಇದಾಗಿದೆ.

ಒಂದು ವರ್ಷದ ಅವಧಿಯಲ್ಲಿ ಮೂರು ಬಾರಿ ವಾಸ್ತವ್ಯ ಸ್ಥಳದ ಮಾಹಿತಿ ನೀಡದೇ ಪರಿಕ್ಷೆ ತಪ್ಪಿಸಿಕೊಂಡಲ್ಲಿ, ವಿಶ್ವ ಕುಸ್ತಿ ಸಂಸ್ಥೆ ಮತ್ತು ವಾಡಾ ರೂಪಿಸಿರುವ ನಿಯಮಾವಳಿಯ ಪ್ರಕಾರ ಎರಡು ವರ್ಷಗಳವರೆಗೆ ಅಮಾನತು ಶಿಕ್ಷೆ ವಿಧಿಸಲು ಅವಕಾಶವಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-1944596635

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.