ನವದೆಹಲಿ: ಉತ್ತರ ಪ್ರದೇಶದ ಗೊಂಡಾದಲ್ಲಿ ಮೇ 10 ರಿಂದ 12 ರವರೆಗೆ ನಡೆಯಲಿರುವ ರ್ಯಾಂಕಿಂಗ್ ಕುಸ್ತಿ ಸ್ಪರ್ಧೆಗಳಿಗೆ ಯಶಸ್ವಿಯಾಗಿ ಹೆಸರು ನೊಂದಾಯಿಸಿಕೊಂಡಿರುವುದಾಗಿ ಭಾರತದ ಕುಸ್ತಿ ತಾರೆ ವಿನೇಶ್ ಫೋಗಟ್ ಮಂಗಳವಾರ ತಿಳಿಸಿದ್ದಾರೆ.

ತಾವು ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ತಡೆಯೊಡ್ಡುತ್ತಿದೆ ಎಂದು ಅವರು ಸೋಮವಾರ ಆರೋಪಿಸಿದ್ದರು. ವಿನೇಶ್ ಅವರಿಗೆ ಈ ಮೊದಲು ನೋಂದಣಿ ಸಾಧ್ಯವಾಗಿರಲಿಲ್ಲ.

ಈ ಸಂಬಂಧ ಕುಸ್ತಿ ಫೆಡರೇಷನ್ ಸ್ಪಷ್ಟನೆ ನೀಡಿದ್ದು, ‘ವಿನೇಶ್ ಅವರಿಗಷ್ಟೇ ಅಲ್ಲ, ಹಲವು ಕುಸ್ತಿ ಸ್ಪರ್ಧಿಗಳಿಗೂ ಪೋರ್ಟಲ್ನಲ್ಲಾದ ತಾಂತ್ರಿಕ ದೋಷದಿಂದಾಗಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಆಗಿರಲಿಲ್ಲ’ ಎಂದು ಹೇಳಿದೆ.

ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಲಿಂಕ್ ಮಂಗಳವಾರ ಬೆಳಿಗ್ಗೆ ದೊರೆತ ತಕ್ಷಣ ವಿನೇಶ್ ಅವರಿಗೆ ತಮ್ಮ ಪ್ರವೇಶ ಸಲ್ಲಿಸಲು ಸಾಧ್ಯವಾಗಿದೆ.

‘ಮುಂಬರುವ ರ್ಯಾಂಕಿಂಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ನನ್ನ ಪ್ರವೇಶ ಪ್ರಕ್ರಿಯೆ ಇಂದು ಬೆಳಿಗ್ಗೆ ಪೂರ್ಣಗೊಂಡಿದೆ. ಸೋಮವಾರ ಲಿಂಕ್ ಸ್ಥಗಿತಗೊಂಡ ಕಾರಣ ನನಗೆ ಇದನ್ನು ಪೂರೈಸಲು ಆಗಿರಲಿಲ್ಲ. ನಿಮ್ಮೆಲ್ಲರ ಬೆಂಬಲಕ್ಕಾಗಿ ಧನ್ಯವಾದಗಳು. 20 ತಿಂಗಳಲ್ಲಿ ನನ್ನ ಮೊದಲ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಎದುರುನೋಡುತ್ತಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ಬರೆದುಕೊಂಡಿದ್ದಾರೆ.

ಮಂಗಳವಾರ ಬೆಳಿಗ್ಗೆಯಷ್ಟೇ ತಮ್ಮ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ವಿನೇಶ್ ಹೇಳಿದ್ದರೂ, ಸೋಮವಾರ ರಾತ್ರಿ 10.29ಕ್ಕೆ ಅವರ ಪ್ರವೇಶ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಡಬ್ಲ್ಯುಎಫ್ಐ ಹೇಳಿದೆ.

ರಾಷ್ಟ್ರೀಯ ಓಪನ್ ರ್ಯಾಂಕಿಂಗ್ ಟೂರ್ನಿಯಲ್ಲಿ ವಿನೇಶ್ ಅವರು 57 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಿಗದಿ ತೂಕಕ್ಕಿಂತ ಹೆಚ್ಚು ತೂಕ ಹೊಂದಿದ್ದ ಕಾರಣಕ್ಕಾಗಿ ಅವರುನ್ನು ಫೈನಲ್ ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಅವರು ಕೆಲದಿನಗಳ ನಂತರ ನಿವೃತ್ತಿ ಪ್ರಕಟಿಸಿದ್ದರು. ಆದರೆ, ಈ ವರ್ಷದ ಏಷ್ಯನ್ ಗೇಮ್ಸ್ ಮತ್ತು 2028ರ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ನಿರ್ಧಾರ ಹಿಂಪಡೆದಿದ್ದರು.

ಅವರು2024ರ ಚುನಾವಣೆಯಲ್ಲಿ ಹರಿಯಾಣ ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಆಯ್ಕೆಯಾಗಿದ್ದರು. ತಾಯಿಯೂ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.