ಬೆಂಗಳೂರು: ‘ಭಾರತ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಆರು ಮಂದಿಯಲ್ಲಿ ನಾನೂ ಒಬ್ಬಳು’ ಎಂದು ಒಲಿಂಪಿಯನ್ ಕುಸ್ತಿ ತಾರೆ ವಿನೇಶ್ ಫೋಗಟ್ ಹೇಳಿಕೊಂಡಿದ್ದಾರೆ.

ವಿಡಿಯೊ ಒಂದರಲ್ಲಿ ಭಾನುವಾರ ಈ ವಿಷಯ ಬಹಿರಂಗಪಡಿಸಿರುವ ಅವರು ‘ಬ್ರಿಜ್ಭೂಷಣ್ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಗುರುತನ್ನು ಬಹಿರಂಗಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳಲ್ಲಿದೆ. ಆದರೆ ಸಂದರ್ಭವು ಬಹಿರಂಗವಾಗಿ ಮಾತನಾಡುವುದನ್ನು ಅನಿವಾರ್ಯಗೊಳಿಸಿತು’ ಎಂದೂ ಹೇಳಿದ್ದಾರೆ.

ಮೇ 10 ರಿಂದ 12ರವರೆಗೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆಯಲಿರುವ ರಾಷ್ಟ್ರೀಯ ರ್ಯಾಂಕಿಂಗ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ವಿನೇಶ್ ಭಾಗವಹಿಸಲಿದ್ದಾರೆ. ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ ನಂತರ ಇದೇ ಮೊದಲ ಬಾರಿ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

ಟೂರ್ನಿಯ ತಾಣವಾದ ಗೊಂಡಾ ನಗರವು ಬ್ರಿಜ್ಭೂಷಣ್ ತವರು ಆಗಿದೆ.

‘ದೂರು ಸಲ್ಲಿಸಿದ ಆರು ಮಂದಿ ಮಹಿಳಾ ಕುಸ್ತಿಪಟುಗಳಲ್ಲಿ ನಾನೂ ಒಬ್ಬಳು. ಈ ಪ್ರಕರಣ ನ್ಯಾಯಾಲಯ ದಲ್ಲಿದ್ದು, ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಅವರಿಗೆ ಸಂಬಂಧಪಟ್ಟ ಸ್ಥಳದಲ್ಲಿ ಮತ್ತು ಅವರ ಕಡೆಯವರು ಬರುವ ಸಾಧ್ಯತೆಯಿರುವ ಸ್ಥಳದಲ್ಲಿ ಸ್ಪರ್ಧಿಸುವುದು ನನ್ನ ಮೇಲೆ ತೀವ್ರ ಮಾನಸಿಕ ಒತ್ತಡ ಬೀರುತ್ತಿದೆ’ ಎಂದು ವಿನೇಶ್ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-51-1507731483

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.