ಗೊಂಡಾ (ಉತ್ತರಪ್ರದೇಶ) (ಪಿಟಿಐ): ಒಲಿಂಪಿಯನ್ ಕುಸ್ತಿತಾರೆ ವಿನೇಶ್ ಪೋಗಟ್ ಅವರು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ವಿಧಿಸಿದ್ದ ನಿರ್ಬಂಧವನ್ನು ಧಿಕ್ಕರಿಸಿ, ರಾಷ್ಟ್ರೀಯ ಓಪನ್ ರ್ಯಾಂಕಿಂಗ್ ಟೂರ್ನಿಯಲ್ಲಿ ಭಾಗವಹಿಸಲು ಮುಂದಾದರು. ಆದರೆ ಫೆಡರೇಷನ್ ಅವರಿಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದ್ದು, ಈ ಬೆಳವಣಿಗೆ ಮತ್ತೊಂದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ಷೋಕಾಸ್ ನೋಟಿಸ್ಗೆ ಅವರು ನೀಡಿದ ಉತ್ತರವನ್ನು ಡಬ್ಲ್ಯುಎಫ್ಐ ತಿರಸ್ಕರಿಸಿತು. ‘ಈ ಕ್ರಮವು ತಮ್ಮ ಪುನರಾಗಮನ ತಡೆಯಲು ಹೂಡಿದ ಪೂರ್ವಯೋಜಿತ ಸಂಚು’ ಎಂದು ವಿನೇಶ್ ಸೋಮವಾರ ಗುಡುಗಿದ್ದಾರೆ.

ಜೂನ್ 26ರವರೆಗೆ ಯಾವುದೇ ದೇಶಿ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಅವರಿಗೆ ಫೆಡರೇಷನ್ ಶುಕ್ರವಾರ ನಿರ್ಬಂಧ ಹೇರಿತ್ತು. ಉದ್ದೀಪನ ಮದ್ದು ಸೇವನೆ (ಡೋಪಿಂಗ್) ತಡೆ ನಿಯಮಗಳ ಪ್ರಕಾರ ಪುನರಾಗಮನ ಮಾಡಿದ ನಂತರ ಆರು ತಿಂಗಳ ಕಡ್ಡಾಯ ನೋಟಿಸ್ ಅವಧಿಯನ್ನು ವಿನೇಶ್ ಪೂರೈಸಿಲ್ಲ ಎಂದು ಡಬ್ಲ್ಯುಎಫ್ಐ ಹೇಳಿದೆ.

‘ನಾನೇನು ಮಾಡಬೇಕೆಂದು ಬಯಸುತ್ತಿದ್ದೀರಿ? ಸನ್ಯಾಸ ಸ್ವೀಕರಿಸ ಬೇಕೇ? ಸೋಲು ಒಪ್ಪಿಕೊಳ್ಳಬೇಕೇ?ಆ ಮೂಲಕ ನನ್ನ ವಿರುದ್ಧ ಸಂಚು ಯಶಸ್ವಿಯಾಗಲು ಬಯಸಿದ್ದೀರಿಯೇ?’ ಎಂದು ಅವರು ಮಾಧ್ಯಮದ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಅವರು ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಅವರನ್ನು ಭೇಟಿಯಾಗಿದ್ದರು.

‘ನನಗೆ ಸ್ಪರ್ಧಿಸಲು ಬಿಡುತ್ತಿಲ್ಲ. ಬೇಸತ್ತು ನಾನೇ ನಿವೃತ್ತಳಾಗಬೇಕೆಂದು ಅವರು (ಫೆಡರೇಷನ್) ಬಯಸುತ್ತಿ ದ್ದಾರೆ. ನ್ಯಾಯಸಮ್ಮತವಾಗಿ ಸ್ಪರ್ಧಿಸುವ ಅವಕಾಶ ನನಗೂ ಕೊಡಿ ಎಂದಷ್ಟೇ ಕೇಳಿದ್ದೇನೆ. ಅವರ ನೋಟಿಸ್ಗೆ ನಾನು ಮೊದಲ ಉತ್ತರಿಸಬೇಕು ಎಂದು ಒತ್ತಾ ಯಿಸುತ್ತಿದ್ದಾರೆ. ಇದೆಲ್ಲಾ ಸಂಚು’ ಎಂದು ವಿನೇಶ್ ದೂರಿದರು.

ಟೂರ್ನಿಯ ಮಹಿಳಾ ವಿಭಾಗದ ಸ್ಪರ್ಧೆಗಳು ಮಂಗಳವಾರ ನಡೆಯಲಿವೆ.

‘ವಾಡಾ ಅಥವಾ ನಾಡಾದ ಯಾವುದೇ ನಿಯಮವನ್ನು ನಾನು ಉಲ್ಲಂಘಿಸಿಲ್ಲ. ಡೋಪ್ ಟೆಸ್ಟ್ಗಳಲ್ಲೂ ಕಳಂಕ ಎದುರಿಸಿಲ್ಲ’ ಎಂದು ವಿನೇಶ್ ಪುನರುಚ್ಚರಿಸಿದರು.

‘ನಾನು ಡೋಪಿಂಗ್ ಪರೀಕ್ಷೆ ನಿಯಮ ಉಲ್ಲಂಘಿಸಿದ್ದರೆ ನಾಡಾ ಅಥವಾ ವಾಡಾ ನನಗೆ ಷೋಕಾಸ್ ನೋಟಿಸ್ ನೀಡುತಿತ್ತು ಅಥವಾ ನಿರ್ಬಂಧ ವಿಧಿಸುತಿತ್ತು. ಇದರ ನಂತರವೂ ನಾನು ಪರೀಕ್ಷೆಗೆ ಒಳಗಾಗಿದ್ದೇನೆ. ನಾನು 2026ರ ಜನವರಿ 1 ರಿಂದ ಭಾಗವಹಿಸಲು ಅರ್ಹಳಾಗಿದ್ದೇನೆ’ಎಂದು ಅಂತರರಾಷ್ಟ್ರೀಯ ಟೆಸ್ಟಿಂಗ್ ಏಜನ್ಸಿ (ಐಟಿಎ) ಹೇಳಿದೆ’ ಎಂದು ವಿನೇಶ್ ವಿವರಿಸಿದರು.

‘ಕಾನೂನಿನ ಮೊರೆಹೋಗಲು ನನಗೆ ಅವಕಾಶ ಇರಬಾರದೆಂದು ಉದ್ದೇಶ ಪೂರ್ವಕವಾಗಿ ಸ್ಪರ್ಧೆಗೆ ಎರಡು ದಿನ ಮೊದಲು ನೋಟಿಸ್ ನೀಡಿದ್ದಾರೆ. ಶುಕ್ರವಾರ ರಾತ್ರಿ ನೋಟಿಸ್ ತಲುಪಿದೆ. ಶನಿವಾರ ನಾನು ತೂಕ ಇಳಿಸುವ ಪ್ರಕ್ರಿಯೆ ಯಲ್ಲಿ ತೊಡಗಿದ್ದೆ. ದಾಖಲೆಗಳನ್ನೂ ಸಿದ್ಧಪಡಿಸಿದ್ದೆ. ಯಾವ ಸಮಯದಲ್ಲಿ ನೋಟಿಸ್ ನೀಡಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತು. ನ್ಯಾಯಾಲಯಗಳಿಗೆರಜೆಯಿರುವ ವೇಳೆಯನ್ನು ನೋಡಿ ಕೊಂಡು ಕೊಟ್ಟಿದ್ದಾರೆ. ಇದೆಲ್ಲಾ ಪೂರ್ವಯೋಜಿತ ಎಂದು ದೂರಿದರು.

‘ಅವರು ಇಲ್ಲಿಗೆ ಬರದಂತೆ ತಡೆಯುವುದಿಲ್ಲ. ಆದರೆ ನೋಟಿಸ್ನಲ್ಲಿ ಪ್ರಸ್ತಾಪಿಸಿರುವ ವಿಷಯಗಳಿಗೆ ಪೂರ್ಣ ಉತ್ತರ ನೀಡುವವರೆಗೆ ಸ್ಪರ್ಧಿಸಲು ಅವಕಾಶವಿಲ್ಲ. ಅಲ್ಲಿಯತನಕ ಆಕೆ ಕಾಯಬೇಕು’ ಎಂದು ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದರು

ತಡವಾಗಿ ನೋಟಿಸ್ ನೀಡಿರುವ ಕ್ರಮದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಸಂಜಯ್ ಸಿಂಗ್ ಅವರು ‘ಗೊಂಡಾದಲ್ಲಿ ಸ್ಪರ್ಧಿಸಲು ಬಯಸಿರುವುದನ್ನು ವಿನೇಶ್ ಇತ್ತೀಚೆಗಷ್ಟೇ ಹೇಳಿದ್ದರು. ಅದಕ್ಕಿಂತ ಮೊದಲು ಅವರ ಪುನರಾಗಮನದ ಯೋಜನೆ ನಮಗೆ ತಿಳಿದಿರಲಿಲ್ಲ’ ಎಂದರು.

ಸಂಜೆ ವಿನೇಶ್ ಅವರು ಸ್ಪರ್ಧೆಯ ತಾಣದಿಂದ ನಿರ್ಗಮಿಸಿದರು. ಅಲ್ಲಿಂದ ಸಾಯ್ನ ಖೇಲೊ ಇಂಡಿಯಾ ಕೇಂದ್ರಕ್ಕೆ ತೆರಳಿದರು. ಆದರೆ ಅಲ್ಲಿಯೂ ಅವರಿಗೆ ತರಬೇತಿಗೆ ಅವಕಾಶ ಸಿಗಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-51-23387315

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.