ನವದೆಹಲಿ : ರಾಷ್ಟ್ರೀಯ ಓಪನ್ ರ್ಯಾಂಕಿಂಗ್ ಕುಸ್ತಿ ಟೂರ್ನಿಯು ಗೊಂಡಾದಲ್ಲೇ (ಉತ್ತರ ಪ್ರದೇಶ) ನಡೆಯಲಿದ್ದು, ತಾಣ ಬದಲಾವಣೆಯಾಗುವುದಿಲ್ಲ. ಕುಸ್ತಿ ತಾರೆ ವಿನೇಶ್ ಫೋಗಟ್ ಅವರ ಸುರಕ್ಷತೆಗೆ ಸಂಬಂಧಿಸಿ ವೈಯಕ್ತಿಕ ಖಾತರಿ ನೀಡುವುದಾಗಿ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಭಾನುವಾರ ಇಲ್ಲಿ ಭರವಸೆ ನೀಡಿದ್ದಾರೆ.

‘ಗೊಂಡಾದಲ್ಲಿ ಸ್ಪರ್ಧೆಗಳ ವೇಳೆ ಅಹಿತಕರ ಘಟನೆಗಳೇನಾದರೂ ನಡೆದಲ್ಲಿ ಅದಕ್ಕೆ ಸರ್ಕಾರವೇ ಹೊಣೆ’ ಎಂದು ವಿನೇಶ್ ಹೇಳಿದ್ದರು. ಮಾತ್ರವಲ್ಲ, ಅಧಿಕಾರಿಗಳು ಪಕ್ಷಪಾತದಿಂದ ವರ್ತಿಸಬಹುದು ಎಂದೂ ಶಂಕೆ ವ್ಯಕ್ತಪಡಿಸಿದ್ದರು.

ಹರಿಯಾಣದ ಶಾಸಕಿಯೂ ಆಗಿರುವ ವಿನೇಶ್ ಸುಮಾರು 18 ತಿಂಗಳ ನಂತರ ಕುಸ್ತಿ ಕಣಕ್ಕೆ ಮರಳುತ್ತಿದ್ದಾರೆ. ಈ ಟೂರ್ನಿ ಮೇ 10 ರಿಂದ 12ರವರೆಗೆ ನಡೆಯಲಿದೆ. 31 ವರ್ಷ ವಯಸ್ಸಿನ ವಿನೇಶ್ 57 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ. 12ರಂದು ಮಹಿಳೆಯರ ವಿಭಾಗದ ಸ್ಪರ್ಧೆಗಳು ನಡೆಯಲಿವೆ.

ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ತವರು ಗೊಂಡಾ ಆಗಿದ್ದು, ಅವರು ಇಲ್ಲಿ ಪ್ರಭಾವಶಾಲಿ ರಾಜಕಾರಣಿ. ಈ ಹಿಂದೆ ಫೆಡರೇಷನ್ ಅಧ್ಯಕ್ಷರಾಗಿದ್ದಾಗ ಅವರ ವಿರುದ್ಧ ವಿನೇಶ್ ಮತ್ತು ಕೆಲವು ಕುಸ್ತಿಪಟುಗಳು ಧರಣಿ ನಡೆಸಿದ್ದರು. ಅವರು ಯುವ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರು ನೀಡಿದ್ದರು.

‘ವಿನೇಶ್ ಅವರಿಗೆ ಸುರಕ್ಷತೆಯ ಬಗ್ಗೆ ಆತಂಕವಿದ್ದರೆ, ಅವರಿಗೆ ಭದ್ರತೆಯ ಬಗ್ಗೆ ವೈಯಕ್ತಿಕವಾಗಿ ಖಾತರಿ ನೀಡುತ್ತೇನೆ. ಯುನೈಟೆಡ್ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಮಾನ್ಯತೆ ಪಡೆದ ರೆಫ್ರಿಗಳು ಎಲ್ಲ ಸೆಣಸಾಟಗಳ ಉಸ್ತುವಾರಿ ವಹಿಸಲಿದ್ದಾರೆ. ಸ್ಪರ್ಧೆಗಳ ವಿಡಿಯೊ ಚಿತ್ರೀಕರಣ ನಡೆಯುವ ಕಾರಣ ಪಕ್ಷಪಾತಕ್ಕೆ ಅವಕಾಶವಿರುವುದಿಲ್ಲ’ ಎಂದು ಸಂಜಯ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

2024ರ ಪ್ಯಾರಿಸ್ ಒಲಿಂಪಿಕ್ಸ್ ನಂತರ ವಿನೇಶ್ ಯಾವುದೇ ಟೂರ್ನಿಯಲ್ಲಿ ಭಾಗವಹಿಸಿರಲಿಲ್ಲ. ಒಲಿಂಪಿಕ್ಸ್ನಲ್ಲಿ 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ನಿಗದಿಗಿಂತ ಹೆಚ್ಚು ತೂಕವಿದ್ದ ಕಾರಣ ಫೈನಲ್ಗೆ ಮೊದಲು ಅನರ್ಹಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-1057624281

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.