ಉಲಾನ್ಬಾತರ್ (ಮಂಗೋಲಿಯಾ): ಭಾರತದ ಉದಯೋನ್ಮುಖ ಬಾಕ್ಸರ್ ವಿಶ್ವನಾಥ್ ಸುರೇಶ್ ಅವರು ಹಾಲಿ ಚಾಂಪಿಯನ್, ಕಜಾಕಸ್ತಾನದ ಸಂಝಾರ್ ತಾಷ್ಕೆಂಬೆ ಅವರಿಗೆ ಆಘಾತ ನೀಡಿ, ಏಷ್ಯಾ ಬಾಕ್ಸಿಂಗ್ ಚಾಂಪಿಯನ್ಷಿಪ್ನ ಪುರುಷರ 50 ಕೆ.ಜಿ. ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದರು.

ಶನಿವಾರ ನಡೆದ ಎಂಟರ ಘಟ್ಟದಲ್ಲಿ ವಿಶ್ವನಾಥ್ ಅವರು 5–0 ಅಂತರದ ಸರ್ವಾನುಮತದ ತೀರ್ಪಿನಿಂದ ವಿಶ್ವದ ಅಗ್ರಮಾನ್ಯ ಬಾಕ್ಸರ್ಗೆ ಸೋಲುಣಿಸಿದರು. ಅದರೊಂದಿಗೆ ಕಂಚಿನ ಪದಕವನ್ನೂ ಖಚಿತಪಡಿಸಿಕೊಂಡರು.

ಭಾರತದ ಆಟಗಾರ ಕ್ವಾರ್ಟರ್ಫೈನಲ್ನಲ್ಲಿಯೂ ಅಮೋಘ ಪ್ರದರ್ಶನ ನೀಡಿದ್ದರು. 5–0ಯಿಂದ ಕಿರ್ಗಿಸ್ತಾನದ ಬೆಕಝತ್ ಎರ್ಗೆಶೋವ್ ವಿರುದ್ಧ ಏಕಪಕ್ಷೀಯವಾಗಿ ಗೆಲುವು ಸಾಧಿಸಿದ್ದರು.

ತಮಿಳುನಾಡಿನ ಪೆರಂಬೂರಿನ ವಿಶ್ವನಾಥ್ ಅವರು ಮಾಜಿ ಬಾಕ್ಸರ್ ಸುರೇಶ್ ಬಾಬು ಅವರ ಪುತ್ರ. ಸದ್ಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2026ರ ಎಲೀಟ್ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಸ್ವರ್ಣ ಜಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.