ನವದೆಹಲಿ : ಭಾರತದ ವಾಲಿಬಾಲ್ ಆಟದಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿದೆ. ವಿದೇಶಿ ಕೋಚ್ ಡ್ರಾಗನ್ ಮಿಹೈಲೊವಿಕ್ ಅವರನ್ನು ಕಿತ್ತುಹಾಕಿದ್ದು, ಅಸಮರ್ಥ ಕೋಚಿಂಗ್ ಸೇರಿ ವಿವಿಧ ಕಾರಣಗಳಿಂದಾಗಿ ಇಬ್ಬರು ಅನುಭವಿ ಆಟಗಾರರು ರಾಷ್ಟ್ರೀಯ ಶಿಬಿರ ತೊರೆದಿದ್ದಾರೆ.

ಶಿಬಿರದ ತಾಣದಲ್ಲಿ ಸೌಕರ್ಯಗಳು ಅವೈಜ್ಞಾನಿಕ ವಾಗಿವೆ. ಆಯ್ಕೆಯಲ್ಲಿ ರಾಜಕೀಯ ನಡೆದಿದೆ ಎಂದೂ ಅವರು ಆರೋಪಿಸಿದ್ದಾರೆ. ‘ಲಿಬೆರೊ’ (ರಕ್ಷಣಾ ವಿಭಾಗದ) ಸ್ಥಾನದಲ್ಲಿ ಆಡುವ ಆನಂದ್ ಕೆ. ಮತ್ತು ‘ಮಿಡ್ಲ್ ಬ್ಲಾಕರ್’ ಜಾನ್ ಜೋಸೆಫ್ ಅವರು ಭಾನುವಾರ ಶಿಬಿರದಿಂದ ಹೊರಟುಹೋಗಿದ್ದಾರೆ.

ಅಹಮದಾಬಾದಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್) ಉತ್ತಮ ಸೌಲಭ್ಯಗಳನ್ನು ಕಲ್ಪಿಸುವಂತೆ ಅವರು ಭಾರತ ಒಲಿಂಪಿಕ್ ಸಂಸ್ಥೆಗೆ ಕಳುಹಿಸಿದ ರಹಸ್ಯ ಸಂದೇಶ ಭಾರತ ವಾಲಿಬಾಲ್ ಫೆಡರೇಷನ್ಗೆ (ವಿಎಫ್ಐ) ಸೋರಿಕೆಯಾಗಿದೆ.

ಆಟಗಾರರು ಮಾಡಿರುವ ಆರೋಪಗಳನ್ನು ವಿಎಫ್ಐ ನಿರಾಕರಿಸಿದೆ. ಆಟದಲ್ಲಿ ರಾಜಕೀಯ ಮಾಡಿದ್ದಾರೆ ಎಂದು ಅವರ ವಿರುದ್ಧ ಸಿಡಿಮಿಡಿಗೊಂಡಿದೆ.

ಕ್ಷಮೆ ಯಾಚಿಸುವಂತೆ ತಮ್ಮನ್ನು ಕೇಳಲಾಗಿದೆ ಎಂದು ಆನಂದ್ ಅವರು ಪಿಟಿಐಗೆ ತಿಳಿಸಿದ್ದಾರೆ. ವಿವಿಧ ಸಮಸ್ಯೆಗಳ ಬಗ್ಗೆ ಏಳರಿಂದ ಎಂಟು ಇಮೇಲ್ಗಳನ್ನು ಇಬ್ಬರು ಆಟಗಾರರು ಕಳುಹಿಸಿದ್ದರು. ನಿಷೇಧದ ಸಾಧ್ಯತೆಯಿದ್ದರೂ ಕ್ಷಮೆ ಕೇಳಲು ಆಟಗಾರರು ನಿರಾಕರಿಸಿದರು.

‘ನಮ್ಮ ವೃತ್ತಿಜೀವನದ ಮೇಲೆ ಇದು ಪರಿಣಾಮವಾಗಲಿದೆ. ಆದರೆ ವಿಷಯ ಮುಚ್ಚಿಡುವಂತಿರಲಿಲ್ಲ. ಅಲ್ಲಿ ವಿಶ್ಲೇಷಣೆ ಇರಲಿಲ್ಲ. ಕೋಚ್ಗಳಿಗೆ ಏನೂ ಗೊತ್ತಿರಲಿಲ್ಲ. ಅವರು ಇನ್ನೂ 1950ರ ದಶಕದಲ್ಲಿದ್ದಂತೆ ಕಂಡರು. ಸ್ಪಷ್ಟ ಕಾರಣ ನೀಡದೇ ಈ ಹಿಂದಿನ ಕೋಚ್ (ಡ್ರಾಗನ್ ಮಿಹೈಲೊವಿಕ್) ಅವರನ್ನು ಕಿತ್ತುಹಾಕಲಾಯಿತು’ ಎಂದು ಅವರು ದೂರಿದರು.

‘ನಮ್ಮ ತಂಡ ಈಗ ಕ್ರಮಾಂಕ ಪಡೆದಿಲ್ಲ. ಆದರೆ ಕಳೆದ ವರ್ಷ ಸೆಂಟ್ರಲ್ ಏಷ್ಯನ್ ವಾಲಿಬಾಲ್ ಸಂಸ್ಥೆ ನಡೆಸಿದ ಟೂರ್ನಿಯಲ್ಲಿ ನಾವು ರನ್ನರ್ ಅಪ್ ಆಗಿದ್ದೆವು. ನಾವು ಸುಧಾರಣೆ ಕಾಣಬೇಕು. ಬೇರೆಲ್ಲ ದೇಶಗಳು ಪ್ರಗತಿ ಕಾಣುತ್ತಿವೆ. ಆದರೆ ನಾವು ಹೀಗೆಲ್ಲ ಮಾಡಿ ನಾವು ಕೆಳಮಟ್ಟಕ್ಕೆ ಇಳಿಯುತ್ತಿದ್ದೇವೆ’ ಎಂದು ಹೇಳಿದರು.

‘ತಂಡದ ಪ್ರತಿಯೊಬ್ಬರಿಗೂ ಇದೇ ಭಾವನೆಯಿದೆ. ಆದರೆ ನಾನು ಮತ್ತು ಜಾನ್ ಅವರಂತೆ ಮಾಡನಾಡಲು ಯಾರೂ ಮುಂದೆಬರುತ್ತಿಲ್ಲ’ ಎಂದರು.

ಇಬ್ಬರು ಆಟಗಾರರು ಶಿಬಿರ ತೊರೆದಿರುವ ಬಗ್ಗೆ ಮಾಹಿತಿಯಿಲ್ಲ. ಆದರೆ ಅವರನ್ನು ಬಲವಂತಪಡಿಸಲಾಗಿದೆ ಎಂಬುದನ್ನು ವಿಎಫ್ಐ ನಿರಾಕರಿಸಿದೆ.

‘ಈಗ ಸಾಕಷ್ಟು ರಾಜಕೀಯ ನಡೆಯುತ್ತಿದೆ. ಇದಿಷ್ಟನ್ನೇ ನಾನು ಹೇಳಲು ಸಾಧ್ಯ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವಿಎಫ್ಐ ಅಧಿಕಾರಿಯೊಬ್ಬರು ತಿಳಿಸಿದರು.

ಅಹಮದಾಬಾದಿನ ವೀರ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ಏಷ್ಯನ್ ವಾಲಿಬಾಲ್ ಒಕ್ಕೂಟದ ಪುರುಷರ ಟೂರ್ನಿ ಜೂನ್ 20 ರಿಂದ 28ರವರೆಗೆ ನಡೆಯಲಿದೆ. 12 ರಾಷ್ಟ್ರಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಬೆಂಗಳೂರು ಚೆನ್ನಾಗಿತ್ತು: ಬೆಂಗಳೂರಿನಲ್ಲಿರುವ ಸೌಲಭ್ಯಗಳ ಮತ್ತು ಅಹಮದಾಬಾದಿನಲ್ಲಿರುವ ಸೌಲಭ್ಯಗಳ ತುಲನೆಯನ್ನು ಆಟಗಾರರು ಮಾಡಿದ್ದಾರೆ. ಬೆಂಗಳೂರಿನಲ್ಲಿ ವೈಜ್ಞಾನಿಕ ರೀತಿಯ ತರಬೇತಿ, ಆಧುನಿಕ ಸಲಕರಣೆಗಳು, ಸ್ಪಷ್ಟ ಯೋಜನೆ, ಆಟಗಾರರ ಸಾಧನೆಯ ಅಳೆಯುವಿಕೆ, ಸ್ಟ್ರೆಂತ್ ಅಂಡ್ ಕಂಡಿಷನಿಂಗ್ಗೆ ಒತ್ತು ನೀಡಲಾಗುತ್ತಿದೆ ಎಂದು ಆಟಗಾರರು ಹೇಳಿದ್ದಾರೆ. ಈ ಹಿಂದೆ ಆಟಗಾರರಿಗೆ ಬೆಂಗಳೂರಿನ ಸಾಯ್ ನೆಲೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.