ವಾಷಿಂಗ್ಟನ್: ಯಾವುದೇ ದೇಶವು ತನಗೆ ನೀಡಬೇಕಾದ ಮೊತ್ತ ಬಾಕಿವುಳಿಸಿಕೊಂಡಲ್ಲಿ ಅಂಥ ದೇಶದ ಅಧಿಕಾರಿಗಳನ್ನು ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಂದ ಹೊರಗಿಡುವುದಕ್ಕೆ ಸಂಬಂಧಿಸಿದ ನಿರ್ಧಾರವನ್ನು ವಿಶ್ವ ಉದ್ದೀಪನಮದ್ದು ಸೇವನೆ ನಿಗ್ರಹ ಘಟಕ (ವಾಡಾ) ಮಂಗಳವಾರ ಮುಂದಕ್ಕೆ ಹಾಕಿದೆ.

ಇದರಿಂದಾಗಿ ವಿಶ್ವಕಪ್ ಫುಟ್ಬಾಲ್ ಟೂರ್ನಿವರೆಗೆ (ಜೂನ್ 12 ರಿಂದ ಜುಲೈ 20) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಆ ದೇಶದ ಇತರ ಅಧಿಕಾರಿಗಳ ಜೊತೆ ಸಂಭವನೀಯ ಸಂಘರ್ಷ ತಪ್ಪಿಸಿದೆ.

‘ಹೊಸ ನಿಯಮ ಜಾರಿಗೆ ತರುವ ಬಗ್ಗೆ ಸೆಪ್ಟೆಂಬರ್ನಲ್ಲಿ, ಅಂದರೆ ಫಿಫಾ ವಿಶ್ವಕಪ್ ಮುಗಿದ ಎರಡು ತಿಂಗಳ ನಂತರ ಪರಿಶೀಲಿಸುವುದಾಗಿ ‘ವಾಡಾ’ ತಿಳಿಸಿದೆ. ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯನ್ನು ಅಮೆರಿಕದ ಜೊತೆ ಕೆನಡಾ ಮತ್ತು ಮೆಕ್ಸಿಕೊ ಸಂಯುಕ್ತವಾಗಿ ಹಮ್ಮಿಕೊಳ್ಳುತ್ತಿವೆ.

ಈ ನಿಯಮವನ್ನು ಜಾರಿಗೆ ತರಲು ವಾಡಾ ಮುಂದಾದಲ್ಲಿ ಅದು 2028ರ ಒಲಿಂಪಿಕ್ಸ್ಗೆ ಮುನ್ನವೇ ಜಾರಿಯಾಗಲಿದೆ.

ವಾಡಾಕ್ಕೆ ಅಮೆರಿಕದಿಂದ ಒಟ್ಟು ಸುಮಾರು ₹68 ಕೋಟಿ ಪಾವತಿಯಾಗಬೇಕಾಗಿದೆ. ಮದ್ದುಸೇವನೆ ಆರೋಪಕ್ಕೆ ಒಳಗಾಗಿದ್ದ ಚೀನಾದ ಈಜುಪಟುಗಳ ಪ್ರಕರಣವನ್ನು ವಾಡಾ ನಿರ್ವಹಿಸಿದ ರೀತಿ ಪ್ರತಿಭಟಿಸಿ ಅಮೆರಿಕ ಈ ಮೊತ್ತ ಬಾಕಿಯಿರಿಸಿದೆ. 2024ರಲ್ಲಿ ಜೋ ಬೈಡನ್ ಅಧ್ಯಕ್ಷರಾಗಿದ್ದ ವೇಳೆ ಮತ್ತು 2025ರಲ್ಲಿ (ಟ್ರಂಪ್ ಅವರ ಹಾಲಿ ಅವಧಿ) ಅಮೆರಿಕದಿಂದ ವಾಡಾಕ್ಕೆ ಸಲ್ಲಬೇಕಾದ ಹಣ ನೀಡಿರಲಿಲ್ಲ.

ಸರ್ಕಾರಗಳು ತಮ್ಮ ಪಾಲಿನ ಮೊತ್ತ ನೀಡದೇ ಹೋದಲ್ಲಿ ಅದು ‘ವಾಡಾ’ದ ಭಾಗಿದಾರರಿಗೆ ಕಳವಳಕಾರಿ ವಿಚಾರವಾಗಲಿದೆ ಎಂದು ಮಹಾನಿರ್ದೇಶಕ ಒಲಿವಿಯರ್ ನಿಗ್ಲಿ ಮಂಗಳವಾರದ ಸಭೆಯ ನಂತರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.