ಬೆಂಗಳೂರು: ಬಸವನಗುಡಿ ಈಜುಕೇಂದ್ರದ ತಂಡಗಳು ನೆಟ್ಟಕಲ್ಲಪ್ಪ ಈಜುಕೇಂದ್ರದಲ್ಲಿ ಭಾನುವಾರ ಮುಕ್ತಾಯಗೊಂಡ ಎನ್‌ಆರ್‌ಜೆ ರಾಜ್ಯ ಸೀನಿಯರ್ ವಾಟರ್ ಪೋಲೊ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗಗಳ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವು.
ಪುರುಷರ ವಿಭಾಗದ ಫೈನಲ್‌ನಲ್ಲಿ ಬಸವನಗುಡಿ (ಬಿಎಸಿ) ತಂಡವು 20–10ರಿಂದ ಸ್ಟಾರ್ ಅಕ್ವಾಟಿಕ್ಸ್ ತಂಡವನ್ನು ಮಣಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಸ್ವಿಮ್‌ಲೈಫ್ ತಂಡವು 8–3ರಿಂದ ಆತಿಥೇಯ ನೆಟ್ಟಕಲ್ಲಪ್ಪ (ಎನ್‌ಎಸಿ) ತಂಡವನ್ನು ಸೋಲಿಸಿತು.
ಮಹಿಳೆಯರ ಫೈನಲ್‌ನಲ್ಲಿ ಬಿಎಸಿ ತಂಡವು 15–2ರಿಂದ ಎನ್‌ಎಸಿ ತಂಡವನ್ನು ಪರಾಭವಗೊಳಿಸಿತು. ಇದಕ್ಕೂ ಮುನ್ನ ನಡೆದ ರೌಂಡ್ ರಾಬಿನ್ ಹಂತದಲ್ಲಿ ಬಿಎಸಿ ತಂಡವು 13–1ರಿಂದ ಸ್ವಿಮ್‌ಲೈಫ್ ತಂಡವನ್ನು; ಎನ್‌ಎಸಿ ತಂಡವು 10–1ರಿಂದ ಸ್ವಿಮ್‌ಲೈಫ್ ತಂಡವನ್ನು ಸೋಲಿಸಿದ್ದವು. ಸ್ವಿಮ್‌ಲೈಫ್ ಮೂರನೇ ಸ್ಥಾನ ಪಡೆಯಿತು.
ಬಿಎಸಿ ತಂಡದ ಚೈತನ್ಯ ಉಮಾಶಂಕರ್ ಮತ್ತು ರೋಶಿನಿ ಎಸ್. ಕ್ರಮವಾಗಿ ಉತ್ತಮ ಆಟಗಾರ ಮತ್ತು ಉತ್ತಮ ಆಟಗಾರ್ತಿಯಾಗಿ ಹೊರಹೊಮ್ಮಿದರು.
ಆದಿತ್ಯಗೆ ಮೂರು ಪ್ರಶಸ್ತಿ: ಕೆನ್ಸಿಂಗ್ಟನ್ ಈಜುಕೊಳದಲ್ಲಿ ನಡೆದ ಎನ್‌ಆರ್‌ಜೆ ರಾಜ್ಯ ಸೀನಿಯರ್ ಡೈವಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಡಾಲ್ಫಿನ್ ಅಕ್ವಾಟಿಕ್ ಸೆಂಟರ್‌ನ (ಡಿಎಸಿ) ಆದಿತ್ಯ ದಿನೇಶ್ ರಾವ್ ಮೂರು ಸ್ಪರ್ಧೆಗಳಲ್ಲಿ ಚಾಂಪಿಯನ್ ಆದರು.
ಫಲಿತಾಂಶ: ಪುರುಷರು: 1 ಮೀ. ಸ್ಪ್ರಿಂಗ್ ಬೋರ್ಡ್: ಆದಿತ್ಯ ದಿನೇಶ್ ರಾವ್ (ಡಿಎಸಿ, 243.20)–1; ವರುಣ್ ಸತೀಶ್ ಪೈ (ಡಿಎಸಿ)–2; ಓಂ ಹೊಂಗೆಕರ್ (ಅಬಾ ಸ್ಪೋರ್ಟ್ಸ್ ಕ್ಲಬ್)–3.
3 ಮೀ. ಸ್ಪ್ರಿಂಗ್ ಬೋರ್ಡ್: ಆದಿತ್ಯ ದಿನೇಶ್ ರಾವ್ (ಡಿಎಸಿ, 288.60)–1; ಓಂ ಹೊಂಗೆಕರ್ (ಅಬಾ ಸ್ಪೋರ್ಟ್ಸ್ ಕ್ಲಬ್)–2; ವರುಣ್ ಸತೀಶ್ ಪೈ (ಡಿಎಸಿ)– 3.
ಹೈ ಬೋರ್ಡ್: ಆದಿತ್ಯ ದಿನೇಶ್ ರಾವ್ (ಡಿಎಸಿ, 259.20)–1; ಆರ್ಯನ್ ಮೋಸೆಸ್ ವ್ಯಾಸ್ (ಡಿಎಸಿ)–2; ವರುಣ್ ಸತೀಶ್ ಪೈ (ಡಿಎಸಿ)– 3.
ಮಹಿಳೆಯರು: 1 ಮೀ ಸ್ಪ್ರಿಂಗ್ ಬೋರ್ಡ್: ಶಕಿನಾ ಜೆ. ರಾವ್ (ಡಿಎಸಿ, 147.80)– 1; ಚೈತ್ರಾ ಎಸ್. ಪ್ರಸಾದ್ (ಡಿಎಸಿ)– 2; ಪೂರ್ವಿಕಾ ವೆಂಕಟೇಶ್ (ಡಿಎಸಿ)– 3.
3ಮೀ ಸ್ಪ್ರಿಂಗ್ ಬೋರ್ಡ್: ಚೈತ್ರಾ ಎಸ್. ಪ್ರಸಾದ್ (ಡಿಎಸಿ, 158.35)– 1; ಶಕಿನಾ ಜೆ. ರಾವ್ (ಡಿಎಸಿ)–2; ನಯನಾ ಪಿ. (ಡಿಎಸಿ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.