ಗಾಂಧಿನಗರ: ಭಾರತದ ಸಂಜನಾ ಅವರು ಇಲ್ಲಿ ನಡೆಯುತ್ತಿರುವ ಏಷ್ಯಾ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನ ಮಹಿಳೆಯರ 77 ಕೆ.ಜಿ. ವಿಭಾಗದಲ್ಲಿ ಶನಿವಾರ ಕಂಚಿನ ಪದಕ ಜಯಿಸಿದರು. ಕೂಟದಲ್ಲಿ ಭಾರತಕ್ಕೆ ಸಿಕ್ಕ ನಾಲ್ಕನೇ ಕಂಚಿನ ಪದಕವಿದು.

ಸಂಜನಾ ಅವರು ಒಟ್ಟಾರೆ 220 ಕೆ.ಜಿ. (ಸ್ನಾಚ್ನಲ್ಲಿ 96 ಕೆ.ಜಿ. ಹಾಗೂ ಕ್ಲೀನ್ ಮತ್ತು ಜೆರ್ಕ್ನಲ್ಲಿ 124 ಕೆ.ಜಿ.) ಭಾರ ಎತ್ತಿದರು. ಚೀನಾದ ಗ್ಯುಫಾಂಗ್ ಲಿಯಾವೊ(ಒಟ್ಟು 265 ಕೆ.ಜಿ.) ಹಾಗೂ ಉತ್ತರ ಕೊರಿಯಾದ ಕ್ಯೊಂಗ್ ರ್ಯೊಂಗ್ ಕಿಮ್ ಅವರು (ಒಟ್ಟು 260 ಕೆ.ಜಿ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು.

ಮಹಿಳೆಯರ 86 ಕೆ.ಜಿ. ವಿಭಾಗದಲ್ಲಿ ವಂಶಿತಾ ವರ್ಮಾ ನಾಲ್ಕನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಅವರು ಒಟ್ಟು 220 ಕೆ.ಜಿ. (ಸ್ನಾಚ್ನಲ್ಲಿ 95 ಕೆ.ಜಿ. ಹಾಗೂ ಕ್ಲೀನ್ ಮತ್ತು ಜೆರ್ಕ್ನಲ್ಲಿ 125 ಕೆ.ಜಿ.) ಭಾರ ಎತ್ತಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-51-645147447

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.