ಗಾಂಧಿನಗರ (ಪಿಟಿಐ): ಏಷ್ಯನ್ ಸೀನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸ್ಫೂರ್ತಿಯುತ ಪ್ರದರ್ಶನ ಮುಂದುವರಿದಿದೆ. ಗುರುವಾರ ನಡೆದ ಪುರುಷರ 71 ಕೆ.ಜಿ. ವಿಭಾಗದಲ್ಲಿ ಅಜಿತ್ ನಾರಾಯಣ ಅವರು ಕ್ಲೀನ್ ಅಂಡ್ ಜರ್ಕ್ ಮತ್ತು ಒಟ್ಟಾರೆ ತೂಕ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ಏಷ್ಯದ ಅತ್ಯುತ್ತಮ ಸ್ಪರ್ಧಿಗಳ ಎದುರು ಕಣಕ್ಕಿಳಿದ ಅವರು ಈ ವಿಭಾಗದಲ್ಲಿ ಒಟ್ಟು 314 ಕೆ.ಜಿ. ಭಾರ ಎತ್ತಿದರು. ಇದರಲ್ಲಿ ಕ್ಲೀನ್ ಮತ್ತು ಜರ್ಕ್ನಲ್ಲಿ 174 ಕೆ.ಜಿ. ಎತ್ತಿದ್ದರು.

ಈ ವಿಭಾಗದಲ್ಲಿ ಚಿನ್ನದ ಪದಕ ಕೊರಿಯಾದ ವೊನ್ ಜು ರಿ ಪಾಲಾಯಿತು. ಅವರು ಒಟ್ಟು 351 ಕೆ.ಜಿ. ಭಾರ ಎತ್ತಿದರು. 335 ಕೆ.ಜಿ. ತೂಕ ಎತ್ತಿದ ಚೀನಾದ ಜಿಯಾನ್ ಚೆನ್ ಬೆಳ್ಳಿ ಪದಕ ಗಳಿಸಿದರು. ಅಜಿತ್ ಈ ಕೂಟದಲ್ಲಿ ಪದಕ ಗೆದ್ದ ಭಾರತದ ಮೂರನೇ ಸ್ಪರ್ಧಿ ಎನಿಸಿದರು. ಕೋಮಲ್ ಕೋಹರ್ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು. ಜ್ಞಾನೇಶ್ವರಿ ಯಾದವ್ ಅವರು 53 ಕೆ.ಜಿ ವಿಭಾಗದಲ್ಲಿ ಬುಧವಾರ ಒಂದು ಬೆಳ್ಳಿ, ಒಂದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-1334385375

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.