ಹೈದರಾಬಾದ್: ಮನೀಷಾ ಚೌಹಾಣ್ ಅವರು ಗಳಿಸಿದ ಏಕೈಕ ಗೋಲಿನ ಬಲದಿಂದ ಭಾರತ ಮಹಿಳೆಯರ ಹಾಕಿ ತಂಡವು ವಿಶ್ವಕಪ್ ಅರ್ಹತಾ ಸುತ್ತಿನ ಸೆಮಿಫೈನಲ್ನಲ್ಲಿ ಜಯಭೇರಿ ಬಾರಿಸಿತು. ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿತು. ಅಂತಿಮ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಜಿ.ಎಂ.ಸಿ. ಬಾಲಯೋಗಿ (ಗಚ್ಚಿಬೌಲಿ ಹಾಕಿ ಸಂಕೀರ್ಣ) ಕ್ರೀಡಾಂಗಣದಲ್ಲಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತವು ಇಟಲಿ ವಿರುದ್ಧ 1–0ಯಿಂದ ಗೆದ್ದಿತು.

ಈ ಪಂದ್ಯದ ಮೊದಲ ಕ್ವಾರ್ಟರ್ನಲ್ಲಿ ಉಭಯ ತಂಡಗಳೂ ರೋಚಕ ಹಣಾಹಣಿ ನಡೆಸಿದವು. ಈ ಅವಧಿಯಲ್ಲಿ ಮಿಡ್ಫೀಲ್ಡ್ನಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಉಭಯ ಆಟಗಾರ್ತಿಯರು ಪೈಪೋಟಿ ನಡೆಸಿದರು. ಈ ಹೊತ್ತಿನಲ್ಲಿ ಇಟಲಿಯ ಆಟಗಾರ್ತಿಯರು ಆಕ್ರಮಣಶೈಲಿಯ ಆಟವಾಡಿದರು. ಇದರಿಂದಾಗಿ ಅವರಿಗೆ ಗೋಲು ಗಳಿಸುವ ಕೆಲವು ಅವಕಾಶಗಳೂ ಸೃಷ್ಟಿಯಾಗಿದ್ದವು. ಆದರೆ ಫಲಪ್ರದವಾಗಲಿಲ್ಲ.

ಎರಡನೇ ಕ್ವಾರ್ಟರ್ನಲ್ಲಿ ಭಾರತ ಮರುಹೋರಾಟ ಮಾಡಿತು. 18ನೇ ನಿಮಿಷದಲ್ಲಿ ಭಾರತವು ಮೊದಲ ಪೆನಾಲ್ಟಿ ಕಾರ್ನರ್ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ನವನೀತ್ ಕೌರ್ ಅವರ ಹೊಡೆತವನ್ನು ತಡೆಯುವಲ್ಲಿ ಇಟಲಿ ಗೋಲ್ಕೀಪರ್ ಲೂಸಿಯಾ ಐನೆಸ್ ಕಾರುಸೊ ಯಶಸ್ವಿಯಾದರು. 27ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಲಭಿಸಿತು. ಆದರೆ ಅದರಲ್ಲಿಯೂ ಗೋಲು ಆಗಲಿಲ್ಲ. ಇದಾಗಿ ಎರಡು ನಿಮಿಷಗಳ ನಂತರ ಮತ್ತೊಂದು ಪೆನಾಲ್ಟಿ ಕಾರ್ನರ್ ಲಭಿಸಿತು. ನವನೀತ್ ಅವರ ಗುರಿ ತಪ್ಪಿತು.

ದ್ವಿತೀಯಾರ್ಧದ ಆರಂಭದಲ್ಲಿ ಇಟಲಿ ಭಾರಿ ಪೈಪೋಟಿಯೊಡ್ಡಿತು. ಪದೇ ಪದೇ ಗೋಲುಪೆಟ್ಟಿಗೆಯತ್ತ ದಂಡೆತ್ತಿ ಬಂದ ಇಟಲಿ ಆಟಗಾರ್ತಿಯರನ್ನು ತಡೆಗಟ್ಟುವಲ್ಲಿ ಭಾರತದ ಗೋಲ್ಕೀಪರ್ ಬಿಚುದೇವಿ ಕರಿಬಮ್ ಯಶಸ್ವಿಯಾದರು.

ಆದರೆ 40ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಭಾರತಕ್ಕೆ ವರದಾನವಾಯಿತು. ಮನೀಷಾ ಅವರು ಮಾಡಿದ ಡ್ರ್ಯಾಗ್ಫ್ಲಿಕ್ ಫಲ ನೀಡಿತು. ಇಟಲಿಯ ರಕ್ಷಣಾ ಪಡೆಯನ್ನು ದಾಟಿದ ಚೆಂಡು ಗೋಲುಪೆಟ್ಟಿಗೆಗೆ ಸೇರಿದಾಗ ಭಾರತದ ಪಾಳೆಯದಲ್ಲಿ ಸಂಭ್ರಮ ಮುಗಿಲುಮುಟ್ಟಿತು.

ಅಂತಿಮ ಕ್ವಾರ್ಟರ್ನಲ್ಲಿಯೂ ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್ಗಳು ಲಭಿಸಿದವು. ಆದರೆ ಇಟಲಿಯ ರಕ್ಷಣಾ ಪಡೆ ಪ್ರತಿರೋಧವೊಡ್ಡಿತು. 59ನೇ ನಿಮಿಷದಲ್ಲಿ ಇಟಲಿಗೆ ಪೆನಾಲ್ಟಿ ಕಾರ್ನರ್ ಲಭಿಸಿತು. ಆದರೆ ಗೋಲು ಗಳಿಸಲು ಸಾದ್ಯವಾಗಲಿಲ್ಲ. ಕೊನೆಯ ನಿಮಿಷದಲ್ಲಿ ಇಟಲಿ ಆಟಗಾರ್ತಿಯರು ಮಾಡಿದ ಪ್ರಯತ್ನಗಳೂ ಕೈಗೂಡಲಿಲ್ಲ.

ಭಾರತ ತಂಡವು ಈಗಾಗಲೇ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿದೆ. ಇದೀಗ ಫೈನಲ್ನಲ್ಲಿಯೂ ಗೆದ್ದು ಅಗ್ರಸ್ಥಾನ ಪಡೆಯುವತ್ತ ಚಿತ್ತ ನೆಟ್ಟಿದೆ.

ಫೈನಲ್ ಇಂದು

ಭಾರತ–ಇಂಗ್ಲೆಂಡ್

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಖೇಲ್, ಜಿಯೊಹಾಟ್ಸ್ಟಾರ್ ಆ್ಯಪ್

(ಮಾಹಿತಿ: ಹಾಕಿ ಇಂಡಿಯಾ ವೆಬ್ಸೈಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.