ಲಿಮಾ: ಜಯ್ ಕುಮಾರ್, ನೀರೂ ಪಾಠಕ್, ರಿಹಾನ್ ಚೌಧರಿ ಮತ್ತು ಸಾಂಡ್ರಾಮೋಳ್ ಸಾಬು ಅವರ ನ್ನೊಳಗೊಂಡ ಭಾರತದ 4x400 ಮೀ. ಮಿಶ್ರ ರಿಲೇ ತಂಡ, ವಿಶ್ವ 20 ವರ್ಷದೊಳಗಿನವರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಫೈನಲ್ ತಲುಪಿದೆ.
ಕಣದಲ್ಲಿದ್ದ ಒಟ್ಟು 20 ತಂಡಗಳಲ್ಲಿ ಭಾರತ ತಂಡ ಮೂರನೇ ಸ್ಥಾನ ಪಡೆದು ಅಂತಿಮ ಹಂತಕ್ಕೆ ಅರ್ಹತೆ ಪಡೆಯಿತು. ತಂಡ 3ನಿ.22.54 ಸೆ.ಗಳಲ್ಲಿ ಗುರಿಲುಪಿತು. ಆಸ್ಟ್ರೇಲಿಯಾ ತಂಡ (3:21.10) ಮೊದಲ ಸ್ಥಾನ ಗಳಿಸಿದರೆ, ಪೋಲೆಂಡ್ ತಂಡ (3:21.92) ಎರಡನೇ ಸ್ಥಾನ ಗಳಿಸಿದೆ.