ಗ್ಯಾಬೋರ್ನ್ (ಬೋಟ್ಸ್ವಾನಾ), (ಪಿಟಿಐ): ಭಾರತದ ಐದು ರಿಲೆ ತಂಡಗಳು, ಶನಿವಾರ ಇಲ್ಲಿ ಆರಂಭವಾಗುವ ವಿಶ್ವ ಅಥ್ಲೆಟಿಕ್ಸ್ ರಿಲೆ ಚಾಂಪಿಯನ್ಷಿಪ್ನಲ್ಲಿ ಕಣಕ್ಕಿಳಿಯಲಿವೆ. ಮುಂದಿನ ವರ್ಷದ ವಿಶ್ವ ಚಾಂಪಿಯನ್ಷಿಪ್ಗೆ ಅರ್ಹತೆ ಗಳಿಸುವುದು ಭಾರತ ತಂಡಗಳ ಗುರಿಯಾಗಿದೆ.

21 ಮಂದಿಯ ಭಾರತ ತಂಡದ ನೇತೃತ್ವವನ್ನು ಸ್ಪ್ರಿಂಟ್ ತಾರೆ ಅನಿಮೇಶ್ ಕುಜೂರ್ ವಹಿಸಿದ್ದಾರೆ. ತಂಡದಲ್ಲಿ ಎಂಟು ಮಂದಿ ಮಹಿಳಾ ಅಥ್ಲೀಟುಗಳು ಇದ್ದಾರೆ.

ಮೊದಲ ದಿನ 4x100 ಮೀ. ಮಿಶ್ರ ರಿಲೆ ಓಟ ನಡೆಯಲಿದ್ದು, ಭಾರತ ಎರಡನೇ ಹೀಟ್ನಲ್ಲಿ ಸ್ಪರ್ಧಿಸಲಿದೆ. ಈ ಹೀಟ್ನಲ್ಲಿ ಅಮೆರಿಕ, ಬೆಲ್ಜಿಯಂ, ಸ್ಪೇನ್, ಚೀನಾ, ಫ್ರಾನ್ಸ್, ಪೋಲೆಂಡ್ ಮತ್ತು ಪರಗ್ವೆ ತಂಡಗಳಿವೆ.

ಇದರ ನಂತರ 4x400 ಮೀ. ಮಿಶ್ರ ರಿಲೆ, ಮಹಿಳೆಯರ 4x100 ಮೀ, ಪುರುಷರ 4x100 ಮೀ. ಮತ್ತು ಪುರುಷರ 4x400 ಮೀ. ಸ್ಪರ್ಧೆಗಳ ಮೊದಲ ಸುತ್ತು ನಡೆಯಲಿವೆ.

2025ರ ಗ್ವಾಂಗ್ಝು ವಿಶ್ವ ರಿಲೆ ಕೂಟದಲ್ಲಿ ಮೊದಲ ಬಾರಿ ಮಿಶ್ರ ರಿಲೆ ಓಟದ ಸ್ಪರ್ಧೆಯನ್ನು ಪರಿಚಯಿಸಲಾಗಿತ್ತು.

4x400 ಮೀ. ಮಿಶ್ರ ರಿಲೆ ಮತ್ತು ಮಿಶ್ರ 4x400 ಮೀ. ಮಿಶ್ರ ರಿಲೆ ವಿಭಾಗದಲ್ಲಿ ಮೊದಲ ಆರು ಸ್ಥಾನ ಗಳಿಸಲಿರುವ ತಂಡಗಳು, ಸೆಪ್ಟೆಂಬರ್ನಲ್ಲಿ ಬುಡಾಪೆಸ್ಟ್ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಅಲ್ಟಿಮೇಟ್ ಚಾಂಪಿಯನ್ಷಿಪ್ಗೆ ಅರ್ಹತೆ ಪಡೆಯಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-4-543873641

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.