ಲಂಡನ್: ಹಿನ್ನಡೆಯಿಂದ ಚೇತರಿಸಿಕೊಂಡ ಭಾರತ ಪುರುಷರ ತಂಡ ಐಟಿಟಿಎಫ್ ವಿಶ್ವ ಟೀಮ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ಸ್ನ ಏಳನೇ ಗುಂಪಿನಲ್ಲಿ ಬುಧವಾರ ಸ್ಲೊವಾಕಿಯಾ ತಂಡವನ್ನು 3–2 ರಿಂದ ಸೋಲಿಸಿತು.

ಈ ಗೆಲುವಿನೊಂದಿಗೆ ಭಾರತ ಗುಂಪಿನಲ್ಲಿ ಅಗ್ರಸ್ಥಾನವನ್ನು ಬಲಪಡಿಸಿಕೊಂಡಿತು. ಭಾರತ ತನ್ನ ಮುಂದಿನ ಗುಂಪು ಪಂದ್ಯವನ್ನು ಗ್ವಾಟೆಮಾಲಾ ವಿರುದ್ಧ ಆಡಲಿದೆ

ಭಾರತ ಈ ಪಂದ್ಯದಲ್ಲಿ ಮೊದಲು ಹಿನ್ನಡೆ ಕಂಡಿತು. ಆದರೆ ಒತ್ತಡಕ್ಕೆ ಸಿಲುಕದೇ ಸಂಯಮದಿಂದ ಆಡಿ ಯಶಸ್ಸು ಪಡೆಯಿತು.

ವಿಶ್ವ ಕ್ರಮಾಂಕದಲ್ಲಿ 149ನೇ ಸ್ಥಾನದಲ್ಲಿರುವ ಲುಬೊಮಿರ್ ಪಿಸ್ಟೆಜ್ ಅವರು ತಮ್ಮೆಲ್ಲಾ ಅನುಭವ ಬಳಸಿ, ವಿಶ್ವ ಕ್ರಮಾಂಕದಲ್ಲಿ 51ನೇ ಸ್ಥಾನದಲ್ಲಿರುವ ಮಾನುಷ್ ಶಾ ಅವರನ್ನು ಸೋಲಿಸಿದರು. ಐದು ಗೇಮ್ಗಳ ಪಂದ್ಯವನ್ನು ಲುಬೊಮಿರ್ 11–8, 5–11, 8–11, 11–5, 11–6 ರಲ್ಲಿ ಗೆದ್ದು ಸ್ಲೊವಾಕಿಯಾಕ್ಕೆ ಮುನ್ನಡೆ ಒದಗಿಸಿದರು.

ಆದರೆ, ಭಾರತದ ಅಗ್ರ ಆಟಗಾರ, 42ನೇ ಕ್ರಮಾಂಕದ ಮಾನವ್ ಠಕ್ಕರ್ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಜಾಕೊಬ್ ಝೆಲಿಂಕಾ ಅವರನ್ನು 11–6, 11–8, 11–6 ರಿಂದ ಸುಲಭವಾಗಿ ಸೋಲಿಸಿದ್ದರಿಂದ ಸ್ಕೋರ್ 1–1ರಲ್ಲಿ ಸಮನಾಯಿತು.

ಆದರೆ ಸ್ಲೊವಾಕಿಯಾ ಮತ್ತೆ ಮುನ್ನಡೆಯಿತು. ತಂಡದ ಅತ್ಯುತ್ತಮ ರಕ್ಷಣೆ ಆಟಗಾರ ವಾಂಗ್ ಯಾಂಗ್ ಕರಾರುವಾಕ್ ಆಟವಾಡಿ 16–14, 11–5, 11–9 ರಿಂದ ಹರ್ಮೀತ್ ದೇಸಾಯಿ ಅವರನ್ನು ಮಣಿಸಿದರು. ಹೊಡೆತಗಳ ವೇಗದಲ್ಲಿ ಬದಲಾವಣೆ, ಪ್ರತ್ಯಾಕ್ರಮಣದ ಮೂಲಕ ಯಾಂಗ್ ಅವರು ಹರ್ಮೀತ್ ಲಯಕಂಡುಕೊಳ್ಳದಂತೆ ನೋಡಿಕೊಂಡರು. ಆ ಮೂಲಕ ಸ್ಲೊವಾಕಿಯಾ ಗೆಲುವಿನ ಹತ್ತಿರ ಬಂದಿತ್ತು.

ಆದರೆ 1–2 ಹಿನ್ನಡೆಯ ಈ ಸಂದರ್ಭದಲ್ಲಿ ಭಾರತ ತಂಡ ಪುಟಿದೆದ್ದಿತು. ಮಾನವ್ ಠಕ್ಕರ್ ಮರು ಸಿಂಗಲ್ಸ್ನಲ್ಲಿ 11–3, 11–3, 11–3 ರಿಂದ ಲುಬೊಮಿರ್ ಅವರ ಸವಾಲನ್ನು ಬದಿಗೊತ್ತಿದ್ದರಿಂದ ಸ್ಕೋರ್ 2–2 ಸಮನಾಯಿತು.

ಎಡಗೈ ಆಟಗಾರ ಮಾನುಷ್ ಅವರು ಒತ್ತಡದಲ್ಲೂ ಆಡಿ 11–8, 11–8, 11–7 ರಿಂದ ಜಾಕೊಬ್ ಅವರನ್ನು ಸೋಲಿಸಿ ಭಾರತದ 3–2 ಗೆಲುವಿಗೆ ಕಾರಣರಾದರು.

ಮಹಿಳಾ ತಂಡ ಮುನ್ನಡೆ: ಭಾರತ ಮಹಿಳಾ ತಂಡ ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ 3–2 ರಿಂದ ಉಕ್ರೇನ್ ತಂಡವನ್ನು ಸೋಲಿಸಿ ಆರನೇ ಗುಂಪಿನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.