ಬೆಂಗಳೂರು: ಭಾರತದ ಪ್ರಾಚೀನ ಕಲೆಯಾದ ಯೋಗ ಈಗ ಜಾಗತಿಕ ಮನ್ನಣೆ ಗಳಿಸಿಕೊಂಡಿದೆ.

ಜೂನ್ 4 ರಿಂದ 8 ರವರೆಗೆ ಅಹಮದಾಬಾದ್ನ ಇಕೆಎ (EKA) ಅರೆನಾದಲ್ಲಿ ಮೊಟ್ಟಮೊದಲ 'ವಿಶ್ವ ಯೋಗಾಸನ ಚಾಂಪಿಯನ್ಶಿಪ್' ನಡೆಯಲಿದ್ದು, ಜಗತ್ತಿನಾದ್ಯಂತ ಭಾರಿ ಕುತೂಹಲ ಮೂಡಿಸಿದೆ.

ಈ ಐತಿಹಾಸಿಕ ಕೂಟದಲ್ಲಿ ಅಮೆರಿಕ, ಕೀನ್ಯಾ, ಮಲೇಷ್ಯಾ ಮತ್ತು ಶ್ರೀಲಂಕಾ ಸೇರಿದಂತೆ ಜಗತ್ತಿನ 60ಕ್ಕೂ ಹೆಚ್ಚು ದೇಶಗಳ 400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಆತಿಥೇಯ ಭಾರತದಿಂದಲೇ 122 ಸದಸ್ಯರ ಬಲಿಷ್ಠ ತಂಡ ಕಣಕ್ಕಿಳಿಯುತ್ತಿದ್ದು, 10 ವರ್ಷದ ಮಕ್ಕಳಿಂದ ಹಿಡಿದು 55 ವರ್ಷದ ಹಿರಿಯರವರೆಗೆ ಒಟ್ಟು 6 ವಯೋಮಾನದ ವಿಭಾಗಗಳಲ್ಲಿ ಕಠಿಣ ಸ್ಪರ್ಧೆ ನಡೆಯಲಿದೆ.

ಯೋಗಾಸನ ಭಾರತದ ಅಧ್ಯಕ್ಷರಾದ ಉದಿತ್ ಶೇಠ್ ಅವರು, ಈ ಚಾಂಪಿಯನ್ಶಿಪ್ ಕ್ರೀಡಾ ಜಗತ್ತಿಗೆ ಭಾರತ ನೀಡಿದ ಅತ್ಯುತ್ತಮ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಜಗತ್ತಿನಾದ್ಯಂತ ಒಟ್ಟು 83 ಪರಿಣಿತ ತೀರ್ಪುಗಾರರು ಈ ಪಂದ್ಯಾವಳಿಯನ್ನು ನಡೆಸಿಕೊಡಲಿದ್ದಾರೆ.

ನಾಳೆ ಯೋಗಾಸನ ಚಾಂಪಿಯನ್ ಶಿಪ್ ಆರಂಭವಾಗಲಿದ್ದು, ಸಾರ್ವಜನಿಕರು ಜೂನ್ 4 ರಿಂದ 8 ರವರೆಗೆ ಪ್ರತಿದಿನ ಬೆಳಗ್ಗೆ 9:00 ರಿಂದ ರಾತ್ರಿ 9:00 ರವರೆಗೆ ದೂರದರ್ಶನ ಟಿವಿ ಚಾನೆಲ್ ಮತ್ತು ದೂರದರ್ಶನದ ಯೂಟ್ಯೂಬ್ ಚಾನೆಲ್ನಲ್ಲಿ ಇದರ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.