ಲಿಮಾ, ಪೆರು: ಭಾರತದ ಆರತಿ, ವಿಶ್ವ 20 ವರ್ಷದೊಳಗಿನವರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಮಹಿಳೆಯರ 10,000 ಮೀ. ರೇಸ್ ವಾಕ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯೊಡನೆ ಕಂಚಿನ ಪದಕ ಗೆದ್ದುಕೊಂಡರು.
17 ವರ್ಷದ ಆರತಿ 44ನಿ.39.39 ಸೆ.ಗಳಲ್ಲಿ ಗುರಿತಲುಪಿದರು. ಚೀನಾದ ಸ್ಪರ್ಧಿಗಳಾದ ಝುವೊಮಾ ಬೈಮಾ (43:26.60) ಮತ್ತು ಮೀಲಿಂಗ್ ಚೆನ್ (44:30.67) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು. ಗುರುವಾರ ರಾತ್ರಿ ಹೈಜಂಪ್ ಸ್ಪರ್ಧೆಯಲ್ಲಿ ಭಾರತದ ಪೂಜಾ ಸಿಂಗ್ 1.83 ಮೀ. ಜಿಗಿದು ಒಟ್ಟಾರೆ 9ನೇ ಸ್ಥಾನ ಪಡೆದು ಫೈನಲ್ ತಲುಪಿದ್ದರು. ಹರಿಯಾಣದ ಫತೇಬಾದ್ ಜಿಲ್ಲೆಯ ಪೂಜಾ, ಬಿ ಗುಂಪಿನಲ್ಲಿದ್ದು 1.83 ಮೀ. ಎತ್ತರ ಜಿಗಿದಿದ್ದರು.
ಭಾರತದ ಪೂಜಾ ಸಿಂಗ್, ಹೈಜಂಪ್ ಅರ್ಹತಾ ಸುತ್ತಿನಲ್ಲಿ ಒಂಬತ್ತನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.