ಬೆಂಗಳೂರು: ಉನ್ನತಿ ಅಯ್ಯಪ್ಪ ಸೇರಿದಂತೆ ಕರ್ನಾಟಕದ ಆರು ಅಥ್ಲೀಟ್‌ಗಳು ಇದೇ 27ರಿಂದ 31ರವರೆಗೆ ಪೆರುನಲ್ಲಿ ನಡೆಯುವ ವಿಶ್ವ ಅಥ್ಲೆಟಿಕ್ಸ್ (20 ವರ್ಷದೊಳಗಿನವರ) ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಉನ್ನತಿ (100 ಮೀಟರ್ ಹರ್ಡಲ್ಸ್ ಮತ್ತು 200 ಮೀ), ಶ್ರೇಯಾ ರಾಜೇಶ್ (400 ಮೀ ಹರ್ಡಲ್ಸ್), ಪಾವನಾ ನಾಗರಾಜ್ (ಲಾಂಗ್‌ಜಂಪ್), ನಿಯೋಲ್ ಕಾರ್ನೆಲಿಯೊ, ಸುದೀಕ್ಷಾ ವಿ. (4x100 ಮೀ ರಿಲೆ) ಮತ್ತು ರಿಹಾನ್ ಸಿ.ಎಚ್. (4x400 ಮೀ. ರಿಲೆ) ಅವರು ಸ್ಪರ್ಧಿಸಲಿದ್ದಾರೆ.
ಮಾಜಿ ಅಥ್ಲೀಟ್ ಸಹನಾ ಕುಮಾರಿ ತಂಡಕ್ಕೆ ಮಾರ್ಗದರ್ಶನ ನೀಡುವರು ಎಂದು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಎ.ರಾಜವೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.