ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಕುಸ್ತಿಪಟುಗಳು ನಾಗ್ಪುರದಲ್ಲಿ ಈಚೆಗೆ ನಡೆದ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಒಂದು ಚಿನ್ನ ಸೇರಿದಂತೆ ಐದು ಪದಕಗಳನ್ನು ಗೆದ್ದಿದ್ದಾರೆ.

ಕರ್ನಾಟಕದ ತೈಮ್ಮೆಶಿ ಜಿ.ಎಂ. ಅವರು ಗ್ರೀಕೊ-ರೋಮನ್ 62 ಕೆ.ಜಿ ವಿಭಾಗದ ಫೈನಲ್ನಲ್ಲಿ 6–1ರಿಂದ ಮಹಾರಾಷ್ಟ್ರದ ದರ್ಪ್ನ್ ಚೌಧರಿ ವಿರುದ್ಧ ಗೆದ್ದು, ಚಿನ್ನಕ್ಕೆ ಕೊರಳೊಡ್ಡಿದರು.

ಮಹಿಳಾ ಕುಸ್ತಿ ವಿಭಾಗದಲ್ಲಿ ಸುಶ್ಮಿತಾ ಕಮ್ಮಾರ್ (36 ಕೆ.ಜಿ) ಬೆಳ್ಳಿ ಪದಕ ಗೆದ್ದರು. ಫ್ರೀಸ್ಟೈಲ್ ಕುಸ್ತಿಯಲ್ಲಿ (52 ಕೆ.ಜಿ) ಮೋಹನ್ ರಾಜ್, ಗ್ರೀಕೊ-ರೋಮನ್ (48 ಕೆ.ಜಿ) ವಿಭಾಗದಲ್ಲಿ ಯಂಕಪ್ಪ ಕೂಡಗಿ, ಮಹಿಳಾ ಕುಸ್ತಿ (50 ಕೆ.ಜಿ) ವಿಭಾಗದಲ್ಲಿ ಪುಷ್ಪಾ ನಾಯಕ್ ಅವರು ಕಂಚಿನ ಪದಕ ಜಯಿಸಿದರು.

ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಆಶ್ರಯದಲ್ಲಿ ಮಹಾರಾಷ್ಟ್ರ ಕುಸ್ತಿಗಿರಿ ಸಂಘವು ಜೂನ್ 20 ರಿಂದ 22ರವರೆಗೆ ಈ ಟೂರ್ನಿಯನ್ನು ನಾಗ್ಪುರದಲ್ಲಿ ಆಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.