ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಸ್ಥಾನಕ್ಕೆ ಪ್ಲಿಸ್ಕೊವಾ

ವಿಶ್ವ ಮಹಿಳಾ ಟೆನಿಸ್‌ ರ‍್ಯಾಂಕಿಂಗ್‌: ಕೆರ್ಬರ್‌ಗೆ ಹಿನ್ನಡೆ
Last Updated 20 ಮೇ 2019, 17:41 IST
ಅಕ್ಷರ ಗಾತ್ರ

ಪ್ಯಾರಿಸ್‌: ಇಟಾಲಿಯನ್‌ ಓಪನ್‌ ಕಿರೀಟ ಮುಡಿಗೇರಿಸಿಕೊಂಡಿರುವ ಕರೋಲಿನಾ ಪ್ಲಿಸ್ಕೊವಾ ವಿಶ್ವ ಟೆನಿಸ್‌ ಕ್ರಮಾಂಕದಲ್ಲಿ‌ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಜಪಾನಿನ ನವೊಮಿ ಒಸಾಕಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಭಾನುವಾರ ನಡೆದ ಇಟಾಲಿಯನ್‌ ಓಪನ್‌ ಫೈನಲ್‌ ಪಂದ್ಯದಲ್ಲಿ ಪ್ಲಿಸ್ಕೊವಾ ಅವರು ಇಂಗ್ಲೆಂಡ್‌ನ ಜೊಹಾನ್ನಾ ಕೊಂಥಾ ಅವರನ್ನು ಮಣಿಸಿದ್ದರು. ಭಾನುವಾರ ಆರಂಭವಾಗುವ ಫ್ರೆಂಚ್‌ ಓ‍ಪನ್‌ ಟೂರ್ನಿಯಲ್ಲಿ ಪ್ಲಿಸ್ಕೊವಾ ಎರಡನೇ ಶ್ರೇಯಾಂಕ ಪಡೆದಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಪ್ಲಿಸ್ಕೊವಾ ಅವರ ಸ್ಥಾನ ಏರಿಕೆಯಿಂದ ಏಂಜೆಲಿಕ್‌ ಕೆರ್ಬರ್‌ ಹಾಗೂ ಪೆಟ್ರಾ ಕ್ವಿಟೊವಾ ಅವರು ಕ್ರಮವಾಗಿ ಎರಡು ಹಾಗೂ ಒಂದು ಸ್ಥಾನ ಇಳಿಕೆ ಕಂಡಿದ್ದಾರೆ.

ರೋಮೆನಿಯಾದ ಸಿಮೊನಾ ಹಲೆಪ್‌ ಮೂರನೇ ಸ್ಥಾನದಲ್ಲಿ ಇದ್ದಾರೆ. ಅಮೆರಿಕಾದ ಸೆರೆನಾ ವಿಲಿಯಮ್ಸ್‌ ಮೊದಲ 10 ಆಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಮೊದಲ ಐದು ಸ್ಥಾನಗಳಲ್ಲಿರುವ ಆಟಗಾರ್ತಿಯರ ಪಟ್ಟಿ

1. ನವೊಮಿ ಒಸಾಕಾ (ಜಪಾನ್‌)

2. ಕರೋಲಿನಾ ಪ್ಲಿಸ್ಕೊವಾ (ಜೆಕ್‌ ಗಣರಾಜ್ಯ)

3. ಸಿಮೊನಾ ಹಲೆಪ್ (ರೋಮೆನಿಯಾ)

4. ಕಿಕಿ ಬೆರ್ಟೆನ್ಸ್‌ (ನೆದರ್ಲೆಂಡ್ಸ್‌)

5. ಏಂಜೆಲಿಕ್‌ ಕೆರ್ಬರ್‌ (ಜರ್ಮನಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT