ಪ್ರೊ ವಾಲಿಬಾಲ್ ಕ್ಯಾಲಿಕಟ್‌ಗೆ ಜಯ

ಕೊಚ್ಚಿ: ಕ್ಯಾಲಿಕಟ್ ಹೀರೊಸ್ ತಂಡ ಪ್ರೊ ವಾಲಿಬಾಲ್ ಲೀಗ್‌ನ ಭಾನುವಾರದ ಪಂದ್ಯದಲ್ಲಿ ಬ್ಲ್ಯಾಕ್‌ಹಾಕ್ಸ್ ಹೈದರಾಬಾದ್ ತಂಡವನ್ನು ಸುಲಭವಾಗಿ ಮಣಿಸಿತು.
ಇಲ್ಲಿನ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಜಿತ್ ಲಾಲ್ ಸಿ ಮತ್ತು ಜೆರೋಮ್ ವಿನೀತ್ ಕ್ಯಾಲಿಕಟ್ ಪರ ಮಿಂಚಿದರು. ಇವರಿಬ್ಬರ ಆಟದ ಬಲದಿಂದ ತಂಡ 15–11, 15–11, 15–7, 12–15, 11–15ರಿಂದ ಗೆದ್ದಿತು.
ಮೊದಲ ಎರಡು ಸೆಟ್‌ನಲ್ಲಿ ಆಧಿ ಪತ್ಯ ಸ್ಥಾಪಿಸಿ ಮುನ್ನಡೆದ ಕ್ಯಾಲಿಕಟ್ ಮೂರನೇ ಸೆಟ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿತು. ಈ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಕೊನೆಯ ಎರಡು ಸೆಟ್‌ಗಳಲ್ಲಿ ಹೈದರಾಬಾದ್ ತಂಡ ಗೆದ್ದಿತು.
ಬರಹ ಇಷ್ಟವಾಯಿತೆ?
0
0
0
0
0
0 comments
View All