ರೋಯಿಂಗ್ ವ್ಯಾಯಾಮ– ನಿಯಮ

7

ರೋಯಿಂಗ್ ವ್ಯಾಯಾಮ– ನಿಯಮ

Published:
Updated:
Prajavani

ಸಪೂರ ದೇಹದವನ್ನು ರೂಪಿಸಿಕೊಳ್ಳುವುದಕ್ಕೆ ಮಾರುಕಟ್ಟೆಯಲ್ಲಿ ಹಲವು ಸಾಧನಗಳಿವೆ. ಭಾರವನ್ನು ಎತ್ತದೆ, ಹೆಚ್ಚು ಶ್ರಮವನ್ನೂ ವಹಿಸದೆ ವ್ಯಾಯಾಮ ಮಾಡಲು ಬಳಸಬಹುದಾದ ಸಾಧನಗಳಲ್ಲಿ ರೋಯಿಂಗ್ ಸಾಧನ ಸಹ ಒಂದು.

ಈ ಸಾಧನವನ್ನು ಬಳಸಿ ಹೆಚ್ಚು, ಕಡಿಮೆ ಕುಳಿತ ರೀತಿಯಲ್ಲಿಯೇ ವ್ಯಾಯಾಮ ಮಾಡಬಹುದಾಗಿದೆ. ಒಂದು ದಿನದಲ್ಲಿ ಇದನ್ನು ಬಳಸಿ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಬಹುದಾಗಿದೆ.

ಸಾಧನವನ್ನು ಹೇಗೆಲ್ಲ ಬಳಸಬಹುದು: ಈ ಸಾಧನದಲ್ಲಿ ಎರಡು ವಿಧವಾದ ವ್ಯಾಯಾಮಗಳನ್ನು ಮಾಡಬಹುದಾಗಿದೆ. ಈ ಸಾಧನದಲ್ಲಿರುವ ಕುರ್ಚಿಯ ಮೇಲೆ ಕುಳಿತು  ಎರಡೂ ಕೈಗಳನ್ನು ಮಂಡಿಯ ಮೇಲಿಟ್ಟು ದೇಹವನ್ನು ಹಿಂದಕ್ಕೆ ಮುಂದಕ್ಕೆ ಮಾಡುವುದು ಮಾಡಬಹುದು. ಈ ವ್ಯಾಯಾಮವನ್ನು ಮಾಡುವಾಗ ಬೆನ್ನಿನ ಭಾಗ ನೇರವಾಗಿರುವಂತೆ ಎಚ್ಚರ ವಹಿಸಬೇಕು ಮತ್ತು ಮುಂದಕ್ಕೆ ದೇಹವನ್ನು ಬಗ್ಗಿಸಿದಾಗ ಎರಡು ಕೈಗಳನ್ನು ಮಂಡಿಯ ಮೇಲಿಟ್ಟು ಹಿಂದಕ್ಕೆ ವಾಲಿದಾಗ ತೆಗೆಯಬೇಕು. (ವ್ಯಾಯಾಮ ಮಾಡುವಾಗ ಸಾಧನದಲ್ಲಿರುವ ಹಿಡಿಕೆಯನ್ನು ಎರಡೂ ಕಾಲಿಗೆ  ಹಾಕಿಕೊಳ್ಳಬೇಕು)  ಇದರಲ್ಲಿ ರಿಸಿಸ್ಟೆಂಟ್‌ ಬ್ಯಾಂಡ್‌ ಸಹ ಇದ್ದು ಅದನ್ನು ಸಾಧನದ ಕುರ್ಚಿಯ ಮೇಲೆ ಕುಳಿತುಕೊಂಡು ಬಳಸಬಹುದು. ಕುರ್ಚಿಯಲ್ಲಿ ಕುಳಿತುಕೊಂಡು, ರೆಸಿಸ್ಟೆಂಟ್‌ ಬ್ಯಾಂಡ್‌ನ ಹಿಡಿಕೆಯನ್ನು ಹಿಡಿದುಕೊಂಡು ಸಾಧನದ ಕೊನೆಯ ಭಾಗದವರೆಗೆ ಹಿಂದಕ್ಕೆ ಮತ್ತು ಸಾಧನದ ಮುಂದಿನ ಭಾಗದವರೆಗೆ ಮುಂದಕ್ಕೆ ಬಳಸಿ ವ್ಯಾಯಾಮ ಮಾಡಬಹುದು. ರೆಸಿಸ್ಟೆಂಟ್‌ ಬ್ಯಾಂಡ್‌ ಬಳಸಿ ವ್ಯಾಯಾಮ ಮಾಡುವಾಗ ಹಿಂದಕ್ಕೆ ವಾಲುವಾಗ ಬೆನ್ನಿನ ಭಾಗವನ್ನು (ಕುರ್ಚಿಯಲ್ಲಿ ಕುಳಿತು ಹಿಂದಕ್ಕೆ ವಾಲುವಂತೆ) ತುಸು ವಾಲಬೇಕು ಹೀಗೆ ಮಾಡುವುದರಿಂದ ಬೆನ್ನಿನ ಭಾಗಕ್ಕೂ ಅರಾಮ ಸಿಗುತ್ತದೆ.

ಯಾವೆಲ್ಲ ಅಂಗಾಂಗಗಳಿಗೆ ಸಹಾಯಕ?: ಈ ಸಾಧನವನ್ನು ಬಳಸಿ ವ್ಯಾಯಾಮ ಮಾಡುವುದರಿಂದ ದೇಹದ ಹಲವು ಭಾಗಗಳಿಗೆ ಅರಾಮು ಸಿಗಲಿದೆ. ಮುಖ್ಯವಾಗಿ ಕುಳಿತೇ ಕೆಲಸ ಮಾಡುವವರಿಗೆ, ಹೆಚ್ಚು ತೂಕವನ್ನು ಎತ್ತಿ ವ್ಯಾ ಯಾಮ ಮಾಡಲು ಆಗದಿರುವವರಿಗೆ ಇದು ಸಹಾಯಕವಾಗಿದೆ. ದೇಹದ ಬೆನ್ನಿನ ಭಾಗ, ಕಾಲು, ಕೈ ಸೇರಿದಂತೆ ದೇಹದ ಮಾಂಸ ಖಂಡಗಳಲ್ಲಿ ಸುಗಮ ರಕ್ತ ಸಂಚಾರಕ್ಕೂ ಇದು ಸಹಾಯಕ. ಇದನ್ನು ಬಳಸುವುದರಿಂದ ಸದೃಢ ತೋಳು, ಭುಜವನ್ನು ಸಹ ಹೊಂದಬಹುದಾಗಿದೆ.

ಕೊಬ್ಬಿನಂಶ ಕರಗಿಸಲು ಸಹಾಯಕ: ಈ ಸಾಧನವನ್ನು ನಿಯಮಿತವಾಗಿ ಬಳಸಿ ವ್ಯಯಾಮ ಮಾಡುವುದರಿಂದ ದೇಹದಲ್ಲಿರುವ ಹೆಚ್ಚುವರಿ ಕೊಬ್ಬಿನಂಶವನ್ನು ಕರಗಿಸಬಹುದು, ಹೊಟ್ಟೆ ಭಾಗದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸಲು ಸಹ ಇದು ಸಹ ಸಹಾಯಕಾರಿಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !