ಸೋಮವಾರ, ಫೆಬ್ರವರಿ 17, 2020
27 °C

ಶೆಫಾಲಿಗೆ ಸಚಿನ್ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಭಾರತ ಮಹಿಳಾ ತಂಡದ ಆಟಗಾರ್ತಿ ಶೆಫಾಲಿ ವರ್ಮಾ ಅವರ ಸಂತಸಕ್ಕೆ ಈಗ ಪಾರವೇ ಇಲ್ಲ. ಅವರಿಗೆ ಪ್ರೇರಣೆಯಾದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮೆಚ್ಚುಗೆಗೆ ಪಾತ್ರರಾಗಿರುವುದೇ ಇದಕ್ಕೆ ಕಾರಣ.

ಶೆಫಾಲಿ ಕುರಿತು ಟ್ವೀಟ್ ಮಾಡಿರುವ ಸಚಿನ್, ‘ಶೆಫಾಲಿ  ನಿಮ್ಮನ್ನು ಭೇಟಿಯಾಗಿದ್ದು ಖುಷಿಕೊಟ್ಟಿತು. ನೀವು ಲಾಹ್ಲಿಯಲ್ಲಿ ನಾನು ಆಡಿದ್ದ ಕೊನೆಯ ರಣಜಿ ಪಂದ್ಯವನ್ನು ನೋಡಲು ಬಂದಿದ್ದನ್ನು ವಿವರಿಸಿದ್ದಿರಿ. ನಿಮ್ಮ ಆ ಪಯಣದ ಕುರಿತು ಕೇಳಿ ಪುಳಕಿತನಾದೆ. ಇವತ್ತು ನೀವು ಭಾರತ ತಂಡಕ್ಕೆ ಆಡುತ್ತಿರುವುದನ್ನು ನೋಡಲು ನಿಜಕ್ಕೂ  ಹೆಮ್ಮೆ ಮತ್ತು ಸಂತಸವಾಗುತ್ತಿದೆ’ ಎಂದಿದ್ದಾರೆ.

‘ನಿಮ್ಮ ಕನಸುಗಳನ್ನು ನಿರಂತರವಾಗಿ ಬೆನ್ನತ್ತಿ. ಏಕೆಂದರೆ, ಕನಸುಗಳು ನನಸಾಗುತ್ತವೆ. ಆಟವನ್ನು ಮನತುಂಬಿ ಆಸ್ವಾದಿಸಿ, ನಿಮ್ಮ ಶ್ರೇಷ್ಠ ಸಾಮರ್ಥ್ಯವನ್ನು ಪಣಕ್ಕೊಡ್ಡಿರಿ’ ಎಂದು ಸಚಿನ್ ಶುಭ ಹಾರೈಸಿದ್ದಾರೆ.

ಸಚಿನ್ ತೆಂಡೂಲ್ಕರ್ 2013ರಲ್ಲಿ ಹರಿಯಾಣದ ಲಾಹ್ಲಿಯಲ್ಲಿ ತಮ್ಮ ವೃತ್ತಿಜೀವನದ ಕೊನೆಯ ರಣಜಿ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಆಗ ಒಂಬತ್ತರ ಬಾಲಕಿ ಶೆಫಾಲಿ ಆ ಪಂದ್ಯವನ್ನು ವೀಕ್ಷಿಸಿದ್ದನ್ನು ಈಚೆಗೆ ತೆಂಡೂಲ್ಕರ್ ಅವರೊಂದಿಗೆ ಭೇಟಿಯಾದಾಗ ಹೇಳಿದ್ದರು. ಶೆಫಾಲಿ ಹರಿಯಾಣದ ರೋಹ್ಟಕ್‌ನವರು.

ಸದ್ಯ ಶೆಫಾಲಿ, ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)