ಶುಕ್ರವಾರ, ಅಕ್ಟೋಬರ್ 18, 2019
24 °C
ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ

ಬ್ಯಾಡ್ಮಿಂಟನ್‌: ಫೈನಲ್‌ಗೆ ಸೈನಾ ನೆಹ್ವಾಲ್‌

Published:
Updated:
Prajavani

ಜಕಾರ್ತ: ಭಾರತದ ಸೈನಾ ನೆಹ್ವಾಲ್‌ ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. 

ಶನಿವಾರ ನಡೆದ ಮಹಿಳಾ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಸೈನಾ 18–21, 21–12, 21–18 ರಿಂದ ಚೀನಾದ ಹಿ ಬಿಂಗ್‌ಜಿಯಾವೊ ಅವರನ್ನು ಮಣಿಸಿದರು. ಭಾರತದ ಆಟಗಾರ್ತಿ ಫೈನಲ್‌ ಸುತ್ತಿನಲ್ಲಿ ಸ್ಪೇನ್‌ನ ಕ್ಯಾರೋಲಿನ್‌ ಮರಿನ್‌ ಅಥವಾ ಚೀನಾದ ಚೆನ್‌ ಯುಫಿ ಅವರನ್ನು ಎದುರಿಸಲಿದ್ದಾರೆ.

ಇದೇ ಮೊದಲ ಬಾರಿಗೆ ಬಿಂಗ್‌ಜಿಯಾವೊ ಜೊತೆ ಅಂಗಣ ಹಂಚಿಕೊಂಡ ಸೈನಾಗೆ ಆರಂಭಿಕ ಸುತ್ತಿನಲ್ಲಿ ಚೀನಾದ ಆಟಗಾರ್ತಿ ಉತ್ತಮ ಪೈಪೋಟಿ ನೀಡಿದರು.

ಆರಂಭದಲ್ಲಿ 2–0 ರಿಂದ ಮುನ್ನಡೆ ಸಾಧಿಸಿದ್ದರು. ನಂತರ ಉತ್ತಮ ಸ್ಮ್ಯಾಷ್‌ಗಳ ಮೂಲಕ ತಿರುಗೇಟು ನೀಡಿದ ಸೈನಾ 5–5 ರ ಸಮಬಲ ಸಾಧಿಸಿದರೂ, ಚೀನಾದ ಆಟಗಾರ್ತಿ 3 ಪಾಯಿಂಟ್‌ಗಳ ಮುನ್ನಡೆ ಗಳಿಸಿ ಗೇಮ್‌ ತಮ್ಮದಾಗಿಸಿಕೊಂಡರು. 

ಎರಡು ಮತ್ತು ಮೂರನೇ ಗೇಮ್‌ಗಳಲ್ಲಿ ಸೈನಾಗೆ ಜಿಂಗ್‌ಜಿಯಾವೊ ತೀವ್ರ ಪೈಪೋಟಿ ನೀಡಿ ಗೆಲುವು ಸಾಧಿಸಿದರು. 

Post Comments (+)