ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತು ಎಫ್‌ಸಿ ತಂಡಕ್ಕೆ ಭರ್ಜರಿ ಗೆಲುವು

ಮಹಿಳೆಯರ ಫುಟ್ಬಾಲ್‌ ಲೀಗ್‌: ರತನ್‌ಬಾಲಾ ಹ್ಯಾಟ್ರಿಕ್‌: ಸಂಧ್ಯಾ ಎರಡು ಗೋಲು
Last Updated 11 ಮೇ 2019, 19:46 IST
ಅಕ್ಷರ ಗಾತ್ರ

ಲುಧಿಯಾನ: ರತನ್‌ಬಾಲಾ ದೇವಿ ಹ್ಯಾಟ್ರಿಕ್‌ ಗೋಲುಗಳ ಮೂಲಕ ಮಿಂಚು ಹರಿಸಿದರು.ಅವರ ಭರ್ಜರಿ ಆಟದ ನೆರವಿನಿಂದ ಸೇತು ಎಫ್‌ಸಿ ತಂಡ ಮಹಿಳೆಯರ ಫುಟ್‌ಬಾಲ್‌ ಲೀಗ್‌ನ ಎರಡನೇ ಗುಂಪಿನ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಕಟಕ್‌ನ ಸಾಯ್‌ ಎಸ್‌ಟಿಸಿ ತಂಡವನ್ನು ಸೇತು ತಂಡ 9–0 ಗೋಲುಗಳ ಅಂತದದಲ್ಲಿ ಮಣಿಸಿತು.

ರತನ್‌ಬಾಲಾ 4, 29 ಮತ್ತು 88ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಸಂಧ್ಯಾ (9 ಹಾಗೂ 87ನೇ ನಿಮಿಷ), ಇಂದುಮತಿ (45+2), ಡಂಗ್ಮಿ ಗ್ರೇಸ್‌ (66ನೇ ನಿಮಿಷ) ಹಾಗೂ ಸಬಿತಾ ಭಂಡಾರಿ (81ನೇ ನಿಮಿಷ) ಗೋಲು ಹೊಡೆದರು. 73ನೇ ನಿಮಿಷದಲ್ಲಿ ಕಟಕ್‌ ತಂಡದ ಶುಭಾ ಪಾತ್ರಾ ಗೋಲಿನ ‘ಉಡುಗೊರೆ’ ನೀಡಿದರು.

ಮತ್ತೊಂದು ಪಂದ್ಯದಲ್ಲಿ ಮಣಿಪುರ ಪೊಲೀಸ್‌ ತಂಡವು ಬರೋಡಾ ಫುಟ್‌ಬಾಲ್‌ ಅಕಾಡೆಮಿಯನ್ನು 6–1ರಿಂದ ಮಣಿಸಿತು. ಮಣಿಪುರ ‍ಪರ ಬಾಲಾ ದೇವಿ ಹ್ಯಾಟ್ರಿಕ್‌ (13, 37 ಹಾಗೂ 45+3 ನೇ ನಿಮಿಷ) ಗೋಲುಗಳನ್ನು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT