ಶಕೀಬ್‌ಗೆ ಮೊದಲ ಸ್ಥಾನ

ಬುಧವಾರ, ಜೂನ್ 19, 2019
31 °C
ಐಸಿಸಿ ಏಕದಿನ ಆಲ್‌ರೌಂಡರ್‌ ರ‍್ಯಾಂಕಿಂಗ್‌: ಅಗ್ರ 10ರಲ್ಲಿ ಭಾರತೀಯರಿಲ್ಲ

ಶಕೀಬ್‌ಗೆ ಮೊದಲ ಸ್ಥಾನ

Published:
Updated:
Prajavani

ದುಬೈ: ರಶೀದ್‌ ಖಾನ್‌ ಅವರನ್ನು ಹಿಂದಿಕ್ಕಿದ ಬಾಂಗ್ಲಾದೇಶದ ಶಕೀಬ್‌ ಅಲ್ ಹಸನ್‌ ಅವರು ಐಸಿಸಿ ಆಲ್‌ರೌಂಡರ್‌ಗಳ ಕ್ರಮಾಂಕಪಟ್ಟಿಯಲ್ಲಿ ಬುಧವಾರ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ಅಗ್ರ 10 ಆಲ್‌ರೌಂಡರ್‌ಗಳ ‍ಪಟ್ಟಿಯಲ್ಲಿ ಒಬ್ಬರೂ ಭಾರತೀಯರಿಲ್ಲದ್ದು ವಿಶೇಷ.

ಐರ್ಲೆಂಡ್‌ನಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಶಕೀಬ್‌ ಅವರು ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಬಾಂಗ್ಲಾದೇಶ  ತಂಡವು ಬಹುರಾಷ್ಟ್ರಗಳು ಪಾಲ್ಗೊಂಡಿದ್ದ ಸರಣಿಯನ್ನು ಮೊದಲ ಬಾರಿ ಗೆದ್ದು ಸಂಭ್ರಮಿಸಿತ್ತು. ಸರಣಿಯ ಮೂರು ಪಂದ್ಯಗಳಲ್ಲಿ ಆಡಿದ್ದ ಶಕೀಬ್‌ ಅವರು 140 ರನ್‌ ಹಾಗೂ ಎರಡು ವಿಕೆಟ್‌ ಕೂಡ ಗಳಿಸಿದ್ದರು. 

ಆಲ್‌ರೌಂಡರ್‌ಗಳ ಕ್ರಮಾಂಕ ಪಟ್ಟಿಯಲ್ಲಿ ರಶೀದ್‌ ಅವರು ಸದ್ಯ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಅಫ್ಗಾನಿಸ್ತಾನದ ಮೊಹಮ್ಮದ್‌ ನಬಿಗೆ ಮೂರನೇ ಸ್ಥಾನ ದಕ್ಕಿದೆ. ಪಾಕಿಸ್ತಾನ ಇಬ್ಬರು ಆಟಗಾರರು ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದ ಕೇದಾರ್‌ ಜಾಧವ್‌ ಅವರು ದಕ್ಷಿಣ ಆಫ್ರಿಕಾದ ಆ್ಯಂಡಿಲೆ ಪೆಹ್ಲುಕ್ವಾಯೊ ಹಾಗೂ ಇಂಗ್ಲೆಂಡ್‌ನ ಮೊಯಿನ್‌ ಅಲಿ ಅವರೊಂದಿಗೆ ಜಂಟಿ 12ನೇ ಸ್ಥಾನದಲ್ಲಿದ್ದಾರೆ. ಹಾರ್ದಿಕ್‌ ಪಾಂಡ್ಯಾ 20ನೇ ಸ್ಥಾನ ಅಲಂಕರಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !