ಬ್ಯಾಡ್ಮಿಂಟನ್: ಮೊಮೊಟಗೆ ಪ್ರಶಸ್ತಿ

ಶುಕ್ರವಾರ, ಏಪ್ರಿಲ್ 19, 2019
22 °C
ಸಿಂಗಪುರ್ ಒಪನ್‌ ಬ್ಯಾಡ್ಮಿಂಟನ್ ಟೂರ್ನಿ; ಸಿನಿಸುಕ, ಒಕುಹರಗೆ ನಿರಾಸೆ

ಬ್ಯಾಡ್ಮಿಂಟನ್: ಮೊಮೊಟಗೆ ಪ್ರಶಸ್ತಿ

Published:
Updated:
Prajavani

ಸಿಂಗಪುರ: ಜಪಾನ್‌ನ ಕೆಂಟೊ ಮೊಮೊಟ ಮತ್ತು ತೈವಾನ್‌ನ ತಾಯ್‌ ಜು ಯಿಂಗ್‌ ಅವರು ಸಿಂಗಪುರ್ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದರು.

 ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಮೊಮೊಟ, ಇಂಡೊನೇಷ್ಯಾದ ಆಂಥೋಣಿ ಸಿನಿಸುಕ್ ಅವರನ್ನು 10–21, 21–19, 21–13ರಿಂದ ಸೋಲಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ತಾಯ್‌ ಜು ಯಿಂಗ್‌, ಜಪಾನ್‌ನ ನಜೊಮಿ ಒಕುಹರ ವಿರುದ್ಧ 21–19, 21–15ರಿಂದ ಗೆದ್ದರು.

ಕೆಂಟೊ ಮೊದಲ ಗೇಮ್‌ ಸೋತರೂ, ಎರಡನೇ ಗೇಮ್‌ನಲ್ಲಿ ಪ್ರಬಲ ಪೈಪೋಟಿ ನೀಡಿ ಸಮಬಲ ಸಾಧಿಸಿದರು. ಆರಂಭದಲ್ಲಿ 11–16ರ ಹಿನ್ನಡೆ ಅನುಭವಿಸಿದ್ದ ಮೊಮೊಟ, ಚುರುಕಿನ ಸರ್ವ್‌ ಹಾಗೂ ಪ್ರಬಲ ಶಾಟ್ಸ್‌ಗಳ ಮೂಲಕ ಸಿನಿಸುಕ ಅವರನ್ನು ಕಂಗೆಡಿಸಿದರು. ಮೂರನೇ ಗೇಮ್‌ನಲ್ಲೂ ಪ್ರಾಬಲ್ಯ ಮುಂದುವರಿಸಿ ಪಂದ್ಯ ಗೆದ್ದರು.

ನೊಜೊಮಿಗೆ ನಿರಾಸೆ: ಭಾರತದ ಪಿ.ವಿ.ಸಿಂಧು ಅವರನ್ನು ಸೆಮಿಫೈನಲ್‌ನಲ್ಲಿ ಸೋಲಿಸಿದ್ದ ಒಕುಹರ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ತಾಯ್‌ ಜು ಯಿಂಗ್‌ ಅವರು ಪದೇ ಪದೇ ನೆಟ್‌ ಬಳಿ ಷಟಲ್ ಅನ್ನು ಡ್ರಾಪ್‌ ಮಾಡಿ ರಂಜಿಸಿದರು. ಅವರ ಕ್ರಾಸ್ ಕೋರ್ಟ್‌ ಶಾಟ್‌ ಮತ್ತು ಬಲಶಾಲಿ ಸ್ಮ್ಯಾಷ್‌ಗಳಿಗೆ ಉತ್ತರಿಸಲು ಒಕುಹರ ಪರದಾಡಿದರು.

ಮಹಿಳೆಯರ ಡಬಲ್ಸ್‌ನಲ್ಲಿ ಜಪಾನ್‌ನ ಮಾಯು ಮತ್ಸು ಮೊಮೊ ಮತ್ತು ವಾಕನ ನಗಹಾರ 21–17, 22–20ರಿಂದ ದಕ್ಷಿಣ ಕೊರಿಯಾದ ಕಿಮ್ ಯೆ ಜಿಯಾಂಗ್ ಹಾಗೂ ಕಾಂಗ್‌ ಯಿ ಯಾಂಗ್‌ ಅವರನ್ನು ಸೋಲಿಸಿದರು. ಪುರುಷರ ಡಬಲ್ಸ್‌ನಲ್ಲಿ ಜಪಾನ್‌ನ ತಾಕೆಶಿ ಕಮುರಾ ಮತ್ತು ಕಿಯಾಗೋ ಸೊನೊದ ಇಂಡೊನೇಷ್ಯಾದ ಮೊಹಮದ್‌ ಆಹ್ಸನ್, ಹೇಂದ್ರ ಸತ್ಯವಾನ್‌ ವಿರುದ್ಧ 21–13, 19–21, 21–17ರಿಂದ ಜಯಿಸಿದರು.

ಮಿಶ್ರ ಡಬಲ್ಸ್‌ನ ಪ್ರಶಸ್ತಿ ಥಾಯ್ಲೆಂಡ್‌ನ ದೆಚಪುಲ್‌ ಪುವರನು ಕೋರೊ ಮತ್ತು ಸಪ್ಸಿರಿ ಪಾಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !