ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಫೈನಲ್‌ ಹಂತಕ್ಕೆ ಮೈಸೂರು, ಕೊಡಗು

ರಾಜ್ಯಮಟ್ಟದ ಆಹ್ವಾನಿತ ಹಾಕಿ ಟೂರ್ನಿ: ಶಿವಮೊಗ್ಗ, ಹಾಸನಕ್ಕೆ ನಿರಾಸೆ
Last Updated 22 ಡಿಸೆಂಬರ್ 2018, 19:54 IST
ಅಕ್ಷರ ಗಾತ್ರ

ಮೈಸೂರು: ರೋಚಕ ಹೋರಾಟದಲ್ಲಿ ಮೈಸೂರು ತಂಡ ‘ಹಾಕಿ ಮೈಸೂರು’ ಆಶ್ರಯದಲ್ಲಿ ನಡೆ ಯುತ್ತಿರುವ ರಾಜ್ಯಮಟ್ಟದ ಆಹ್ವಾನಿತ ಹಾಕಿ ಟೂರ್ನಿಯ ಫೈನಲ್‌ ಪ್ರವೇಶಿಸಿತು.

ಮೈಸೂರು ವಿಶ್ವವಿದ್ಯಾಲಯ ಹಾಕಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಮೈಸೂರು ತಂಡದವರು 2–1ರಿಂದ ಶಿವಮೊಗ್ಗ ತಂಡವನ್ನು ಪರಾಭವಗೊಳಿಸಿದರು.

ಆತಿಥೇಯ ತಂಡದವರು ವಿರಾ ಮದ ವೇಳೆಗೆ 2–0 ಗೋಲುಗಳಿಂದ ಮುನ್ನಡೆ ಸಾಧಿಸಿದ್ದರು. ಚುರುಕಿನ ಆಟದ ಮೂಲಕ ಬಿದ್ದಪ್ಪ 14ನೇ ನಿಮಿಷದಲ್ಲಿ ಗೋಲು ಗಳಿಸಿ 1–0 ಮುನ್ನಡೆಗೆ ಕಾರಣರಾದರು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದರು.18ನೇ ನಿಮಿಷದಲ್ಲಿ ಮುದ್ದಪ್ಪ ಚೆಂಡನ್ನು ಗುರಿ ಸೇರಿಸಿದರು. ಇದರಿಂದ ಮೈಸೂರು ಮುನ್ನಡೆ 2–0 ಗೋಲುಗಳಿಗೇರಿತು.

ಹಿನ್ನಡೆಯಿಂದ ವಿಚಲಿತರಾಗದ ಶಿವಮೊಗ್ಗ ತಂಡದವರು ಗೋಲು ಗಳಿಸುವ ಪ್ರಯತ್ನ ಮುಂದುವರಿಸಿದರು. ಇದರ ಫಲವೇ ದ್ವಿತೀಯಾರ್ಧದಲ್ಲಿ ಒಂದು ಗೋಲು ಒಲಿಯಿತು. 39ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ವಿಘ್ನೇಶ್‌ ಗೋಲಿನಲ್ಲಿ ಪರಿವರ್ತಿಸಿದರು.

ಬಳಿಕ ಉಭಯ ತಂಡಗಳು ಗೋಲು ಗಳಿಸಲು ಸಾಕಷ್ಟು ಶ್ರಮ ವಹಿಸಿದವು. ಆದರೆ, ಮೈಸೂರು ತಂಡ ಕೊನೆಯಲ್ಲಿ ರಕ್ಷಣೆಗೆ ಹೆಚ್ಚು ಒತ್ತು ನೀಡಿ ಆಡಿತು.

ಇದಕ್ಕೂ ಮೊದಲು ನಡೆದ ಇನ್ನೊಂದು ಸೆಮಿಫೈನಲ್‌ ಹೋರಾಟದಲ್ಲಿ ಕೊಡಗು ತಂಡದವರು 4–1 ಗೋಲುಗಳಿಂದ ಹಾಸನ ತಂಡವನ್ನು ಮಣಿಸಿದರು.

ವಿರಾಮದ ವೇಳೆಗೆ 1–1 ಗೋಲಿನಿಂದ ಸಮಬಲ ಸಾಧಿಸಿದ್ದವು. ಕೊಡಗು ತಂಡದ ಮಣಿ (4ನೇ ನಿ.), ಪೊನ್ನಣ್ಣ (41ನೇ ನಿ.), ಸೋಮಣ್ಣ (54ನೇ, 56ನೇ ನಿ.) ಗೋಲು ಗಳಿಸಿದರು. ಹಾಸನ ತಂಡದ ಪವನ್‌ ಕುಮಾರ್‌ (11ನೇ ನಿ.) ಗೋಲು ತಂದಿತ್ತರು. ಮೈಸೂರು ಹಾಗೂ ಕೊಡಗು ತಂಡಗಳ ನಡುವೆ ಫೈನಲ್‌ ಹೋರಾಟ ಭಾನುವಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT