ಸರ್ಜಾಪುರ(ಆನೇಕಲ್): ಇಲ್ಲಿಗೆ ಸಮೀಪದ ಟಿ.ಸಿ.ಹಳ್ಳಿಯಲ್ಲಿ ಆನೇಕಲ್ ತಾಲ್ಲೂಕು ವಹ್ನಿಕುಲ ಕ್ಷತ್ರಿಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಿದೆ. ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು, ಮೇ 4ರಂದು ಅಂತಿಮ ಹಂತದ ಪಂದ್ಯಗಳು ನಡೆಯಲಿವೆ.

ಪಂದ್ಯಾವಳಿಗೆ ಚಾಲನೆ ನೀಡಿದ ಶಿವನಾಪುರ ಆದಿಶಕ್ತಿ ಮಹಾಸಂಸ್ಥಾನದ ಮಠದ ಪ್ರಣವಾನಂದಪುರಿ ಸ್ವಾಮೀಜಿ, ವಹ್ನಿಕುಲ ಸಮುದಾಯವನ್ನು ಸಂಘಟಿಸಲು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ. ಸೋಲು ಗೆಲುವಿನ ಲೆಕ್ಕ ಮಾಡದೇ ಸ್ಪರ್ಧೆಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೊಡುಗೆ ನೀಡಬೇಕು. ಸಂಸ್ಕೃತಿ ಮತ್ತು ಬಾಂಧವ್ಯವನ್ನು ಬೆಸೆಯುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.

ನಿವೃತ್ತ ಯೋಧ ನಿವೃತ್ತ ಯೋಧ ಸಿ.ವೇಣು, ಟಿ.ವಿ.ಬಾಬು, ಕೆ.ಪಿ.ರಾಜು ಮಾತನಾಡಿದರು. ವಹ್ನಿಕುಲ ಕ್ಷತ್ರಿಯ ಸಂಘದ ಗೌರವ ಅಧ್ಯಕ್ಷ ರಾಜ್ ಕೃಷ್ಣಮೂರ್ತಿ, ಮುಖಂಡರಾದ ಜಯಣ್ಣ, ಮಾಯಸಂದ್ರ ನಾರಾಯಣಪ್ಪ, ಜಯರಾಮ್, ಪ್ರಮೀಳ ರಾಮಚಂದ್ರಪ್ಪ, ಶ್ರೀಧರ್, ರಾಮಚಂದ್ರ, ಸುಬ್ರಮಣಿ, ಮುನಿರಾಜು, ಗೋಪಿ, ಚಂದ್ರಹಾಸ್, ಬಾಲರಾಜ್, ಚಿಕ್ಕುನಿಸ್ವಾಮಿ, ರಮೇಶ್ ಬಾಬು, ಮುನಿರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-15-1889705627

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.