ಚಂದಾಪುರ (ಆನೇಕಲ್): ಚಂದಾಪುರ ಸೂರ್ಯಸಿಟಿಯಲ್ಲಿ ಹೆಬ್ಬಗೋಡಿ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನವನ್ನು ಇಗ್ಗಲೂರು ತಂಡ ಮತ್ತು ಎರಡನೇ ಸ್ಥಾನವನ್ನು ಆನೇಕಲ್ ತಂಡ ಗಳಿಸಿ ಟ್ರೋಫಿ ಮತ್ತು ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಆನೇಕಲ್ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಕಳೆದ ಎರಡು ದಿನಗಳಿಂದ ಸೂರ್ಯ ಸಿಟಿಯಲ್ಲಿ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ವಿಜೇತ ತಂಡಕ್ಕೆ ಶಾಸಕ ಬಿ.ಶಿವಣ್ಣ ಬಹುಮಾನ ವಿತರಿಸಿದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ಕ್ರೀಡೆಗಳಿಂದಾಗಿ ನಾಯಕತ್ವ ಗುಣ ಬೆಳೆಯುತ್ತದೆ. ಆನೇಕಲ್ನಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರೀಡಾ ಪಂದ್ಯಾವಳಿಗಳು ಹೆಚ್ಚಾಗುತ್ತಿದ್ದು ಕಬಡ್ಡಿ ವಾಲಿಬಾಲ್ ಕ್ರಿಕೆಟ್ನಂಥ ಪಂದ್ಯಗಳು ಹೆಚ್ಚಾಗುತ್ತಿದೆ. ಇದರಿಂದಾಗಿ ಯುವಕರಲ್ಲಿನ ಸೂಕ್ತ ಕ್ರೀಡಾ ಪ್ರತಿಭೆ ಹೊರಬರುತ್ತಿದೆ. ಯುವಕರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಇದಕ್ಕೆ ಪೂರಕವಾಗುವಂತೆ ಆನೇಕಲ್ ತಾಲ್ಲೂಕಿನಲ್ಲಿ ಕ್ರೀಡಾ ಸಂಕಿರಣಗಳನ್ನು ರೂಪಿಸಲಾಗುವುದು ಎಂದರು.

ಮೇ 23ರಂದು ಸೂರ್ಯ ಸಿಟಿ ನಾಲ್ಕನೇ ಹಂತ ಇಂಡ್ಲವಾಡಿಯಲ್ಲಿ ದೇಶದ ಎರಡನೇ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಇದರಿಂದಾಗಿ ಕ್ರೀಡಾ ಚಟುವಟಿಕೆಗಳು ಈ ಭಾಗದಲ್ಲಿ ಹೆಚ್ಚಾಗಲಿವೆ. ಆನೇಕಲ್ ತಾಲ್ಲೂಕಿನ ವ್ಯಾಪಾರ ವಹಿವಾಟುಗಳು ಸಹ ಹೆಚ್ಚಾಗುತ್ತವೆ ಎಂದರು.

ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕ ಉಲ್ಲಾಸ್, ಆನೇಕಲ್ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಪಾಪು, ಹೆಬ್ಬಗೋಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬನಹಳ್ಳಿ ಮಧುಸೂದನ್, ಹುಸ್ಕೂರು ಮದ್ದೂರಪ್ಪ, ಬನಹಳ್ಳಿ ಅಭಿ, ಶಂಭಯ್ಯ, ಬೆಸ್ತಮಾನಹಳ್ಳಿ ಯಲ್ಲಪ್ಪ, ಅರೇಹಳ್ಳಿ ಮಧು, ಸರ್ಕಲ್ ವೆಂಕಿ, ಪುಷ್ಪರಾಜು, ವೇಣು, ಸುಬ್ರಮಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-15-1338775148

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.