ಗೋಣಿಕೊಪ್ಪಲು: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 3ನೇ ವರ್ಷದ ಟಿ 20 ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಚೆಕ್ಕೇರ ಚಂದ್ರ ಪ್ರಕಾಶ್ ಮಾಲಿಕತ್ವದ ಅಂಜಿಗೇರಿ ನಾಡ್ ತಂಡ ಪಡೆದುಕೊಂಡಿತು.

ಅಂಜಿಗೇರಿ ನಾಡ್ ತಂಡ ಫೈನಲ್ ಪಂದ್ಯದಲ್ಲಿ ಎಂಟಿಬಿ ರಾಯಲ್ಸ್ ವಿರುದ್ಧ ರೋಚಕ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಟಾಸ್ ಗೆದ್ದ ಎಂಟಿಬಿ ರಾಯಲ್ಸ್ ತಂಡ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ಇದರಿಂದ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಅಂಜಿಗೇರಿ ನಾಡ್, ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 175 ರನ್ ಗಳ ಉತ್ತಮ ಮೊತ್ತ ಕಲೆಹಾಕಿತು. ಸುಮುಖ್ 51 ಎಸೆತಗಳಲ್ಲಿ 78 ರನ್ ಸಿಡಿಸಿದರು. ಮಂಜು ಕೆ. ಬಿ 38 ಎಸೆತಗಳಲ್ಲಿ 33, ಪವನ್ ಉತ್ತಪ್ಪ 14 ಎಸೆತಗಳಲ್ಲಿ 29 ರನ್ ಗಳ ಕಾಣಿಕೆ ನೀಡಿದರು. ಎಂ.ಟಿ.ಬಿ ರಾಯಲ್ಸ್ ಪರ ಕರಣ್ 2, ಅಯ್ಯಪ್ಪ ಮತ್ತು ಶಿಪ್ರೆಜ್ ಸೋಮಣ್ಣ ತಲಾ 1 ವಿಕೆಟ್ ಪಡೆದರು.

176 ರನ್ಗಳ ಗುರಿ ಬೆನ್ನಟ್ಟಿದ ಎಂಟಿಬಿ ರಾಯಲ್ಸ್ ಉತ್ತಮ ಆರಂಭ ಪಡೆದುಕೊಂಡು ಗೆಲುವಿನ ಆಸೆ ಚಿಗುರಿಸಿತ್ತು. ನಂತರ ವಿಕೆಟ್ ಕಳೆದುಕೊಂಡ ಪರಿಣಾಮ ಗೆಲುವಿಗಾಗಿ ತೀವ್ರ ಹೋರಾಟ ನಡೆಸಿತು. ಕೊನೆಯ ಎಸೆತದವರೆಗೂ ಕುತೂಹಲವನ್ನು ಕೆರಳಿಸಿದ್ದ ಪಂದ್ಯದಲ್ಲಿ 20 ಓವರ್ಗಳ ಮುಕ್ತಾಯಕ್ಕೆ 6 ವಿಕೆಟ್ಗಳನ್ನು ಕಳೆದುಕೊಂಡು 174 ರನ್ ಗಳಿಸಿದ ಎಂ.ಟಿ.ಬಿ ರಾಯಲ್ಸ್ 1 ರನ್ ಗಳಿಂದ ವೀರೋಚಿತ ಸೋಲನುಭವಿಸಿತು. ಇದರಿಂದ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ವೈಶಾಕ್ ತಿಮ್ಮಯ್ಯ 49 ಎಸೆತಗಳಲ್ಲಿ 70 ರನ್ ಬಾರಿಸಿದರು.

ವೈಯಕ್ತಿಕ ಪ್ರಶಸ್ತಿ: ಮ್ಯಾನ್ ಆಫ್ ದಿ ಸೀರಿಸ್ ಆಗಿ ಕೊಡವ ಟ್ರೈಬ್ ನ ಅಂಕುಶ್ ಬೋಪಣ್ಣ, ಬೆಸ್ಟ್ ಬ್ಯಾಟ್ಸ್ ಮನ್ ಆಗಿ ಅಂಜಿಗೇರಿ ನಾಡ್ ನ ಬಡುವಮಂಡ ಶಮಿತ್ ಸೋಮಣ್ಣ, ಬೆಸ್ಟ್ ಬೌಲರ್ ಆಗಿ ಎಂ.ಟಿ.ಬಿ. ರಾಯಲ್ಸ್ ನ ಅಪ್ಪಾರಂಡ ನೆಲ್ ದೇವಯ್ಯ, ಎಮರ್ಜಿಂಗ್ ಪ್ಲೇಯರ್ ಆಗಿ ಕೂರ್ಗ್ ಬ್ಲಾಸ್ಟರ್ಸ್ ನ ತಕ್ಷ್ , ಬೆಸ್ಟ್ ಕ್ಯಾಚ್ ಬ್ಲೇಜ್ ಬ್ರಿಗೇಡ್ನ ಮಣವಟ್ಟಿರ ತರಣ್, ಅಪ್ ಕಮಿಂಗ್ ಕ್ರಿಕೆಟರ್ ಆಗಿ ಕೊಡವ ರೈಸಿಂಗ್ ಸ್ಟಾರ್ ನ ಮಾಳೇಟಿರ ಅನ್ಸುಲ್, ಲಾಂಗೆಸ್ಟ್ ಸಿಕ್ಸ್ ಪ್ರಗತಿ ಕ್ರಿಕೆಟ್ ಅಕಾಡಮಿಯ ಅಲೆನ್ ದೇವಯ್ಯ, ಬೆಸ್ಟ್ ವಿಕೆಟ್ ಕೀಪರ್ ಎಂ.ಟಿ.ಬಿ ರಾಯಲ್ಸ್ ನ ಚೆರುಮಂದಂಡ ಮಿಥುನ್ ಮುತ್ತಣ್ಣ, ಬೆಸ್ಟ್ ಫೀಲ್ಡರ್ ಅಂಜಿಗೇರಿ ನಾಡ್ ಬೊಜ್ಜಠಗಡ ಗಗನ್ ಗಣಪತಿ, ಸೀನಿಯರ್ ಕ್ರಿಕೆಟರ್ ಎಂ.ಟಿ.ಬಿ ರಾಯಲ್ಸ್ ನ ಕೊಕ್ಕಲೇರ ಅಪ್ಪಯ್ಯ, ಯಂಗೆಸ್ಟ್ ಪ್ಲೇಯರ್ ಮಂಡಿರ ಕೃಷಿವ್, ಫೇರ್ ಪ್ಲೇ ಪ್ರಶಸ್ತಿಯನ್ನು ಟೀಮ್ ಲೆವರೇಜ್ ಪಡೆದುಕೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-51-703817059

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.