ಬಳ್ಳಾರಿ: ‘ಮಲೇಶಿಯಾದಲ್ಲಿ ನಡೆಯಲಿರುವ 22ನೇ ಅಂತರಾಷ್ಟ್ರೀಯ ‘ಒಕಿನೊವ ಗೋಜು ರಾಯ್ ಇಪಾನ್ ಸಿಟಿ ಮುಕ್ತ ಕರಾಟೆ ಸ್ಪರ್ಧೆ-2026’ಕ್ಕೆ ಬಳ್ಳಾರಿಯ ‘ಶ್ರೀ ಪಂಚಾಕ್ಷರಿ ಮಾರ್ಷಲ್ ಆರ್ಟ್ಸ್ ಟ್ರಸ್ಟ್’ನ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ’ ಎಂದು ಟ್ರಸ್ಟ್ ಅಧ್ಯಕ್ಷ ಹಾಗೂ ತರಬೇತಿದಾರ ಬಂಡಾಳ್ ಎಂ. ಮೃತ್ಯುಂಜಯ ಸ್ವಾಮಿ ಹೇಳಿದರು.

‘ಮೇ 8ರಿಂದ 10ರವರೆಗೆ ನಡೆಯಲಿರುವ ಸ್ಪರ್ಧೆಗೆ ನಯೋನಿಕ ಮಂಗಳಂ, ನಕ್ಷತ್ರ ವರ್ಣ ಮಂಗಳಂ, ಪ್ರಜ್ವಲ ಗಣೇಶ್ ಹಾಗೂ ಮುದಿಯಮಂ ದೇವಗನ್ ಶ್ರೀವತ್ಸ ಆಯ್ಕೆಯಾಗಿದ್ದಾರೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕಳೆದ 25 ವರ್ಷಗಳಿಂದ ಟ್ರಸ್ಟ್ ಮೂಲಕ ಬಾಲ ಭಾರತಿ ಶಾಲೆಯಲ್ಲಿ ಉಚಿತ ಕರಾಟೆ, ಯೋಗ ಹಾಗೂ ಧ್ಯಾನ ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳು, ತರಬೇತಿ ಶಿಬಿರಗಳು, ಶ್ರೀಲಂಕಾ, ಇಂಡೋನೇಷಿಯಾ, ಸಿಂಗಾಪುರ್, ಮಲೇಶಿಯಾ ಹಾಗೂ ಜಪಾನ್ನಲ್ಲಿ ನಡೆದ ಕೂಟಗಳಲ್ಲಿ ಟ್ರಸ್ಟ್ನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಟ್ರಸ್ಟ್, ಕ್ರೀಡಾಸಕ್ತಿ ಬೆಳೆಸಲು ಕಾರ್ಯನಿರ್ವಹಿಸುತ್ತಿದೆ. ವಿಕ್ರಮ ಮಹಿಪಾಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-25-248875178

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.