ಬೆಂಗಳೂರು: ಕರ್ನಾಟಕ ರಾಜ್ಯ ಚೆಸ್ ಚಾಂಪಿಯನ್ಷಿಪ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ಗೌರವಕ್ಕೆ ನಗರದ ಹತ್ತು ವರ್ಷ ವಯಸ್ಸಿನ ಪ್ರತಿಭೆ ಅಯಾನ್ ಫುಟಾಣೆ ಪಾತ್ರರಾಗಿದ್ದಾರೆ. ಭಾನುವಾರ ಮುಕ್ತಾಯಗೊಂಡ ಈ ಚಾಂಪಿಯನ್ ಷಿಪ್ನಲ್ಲಿ ಅಯಾನ್ 9 ಸುತ್ತುಗಳಿಂದ 8 ಪಾಯಿಂಟ್ಸ್ ಕಲೆಹಾಕಿದನು.

ತೀವ್ರ ಪೈಪೋಟಿ ಕಂಡುಬಂದ ಈ ಕೂಟದಲ್ಲಿ ಬೆಂಗಳೂರಿನವರೇ ಆದ ಕೃಷ್ಣ, ಸುದರ್ಶನ ಭಟ್ ಮತ್ತು ಸಿದ್ಧಾರ್ಥ ಪೂಂಜಾ ಅವರೂ ಎಂಟು ಪಾಯಿಂಟ್ಸ್ ಪಡೆದರು. ಆದರೆ ಟೈಬ್ರೇಕ್ ಆಧಾರದಲ್ಲಿ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದರು.

ಕನಕಪುರ ರಸ್ತೆಯ ಪ್ರೆಸ್ಟೀಜ್ ಸ್ರೀಹರಿ ಖೋಡೆ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಭಾಂಗಣದಲ್ಲಿ ಅಕ್ಷಯಕಲ್ಪ ಪ್ರಾಯೋ ಜಕತ್ವದಲ್ಲಿ ಈ ಟೂರ್ನಿ ನಡೆಯಿತು.

ಅನುಭವಿ ಆಟಗಾರರಿದ್ದ ಕಣದಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆಯಿಂದ ಆಡಿದ ಅಯಾನ್ ಸಂಯಮ, ಏಕಾಗ್ರತೆಯಿಂದ ಆಡಿ ಟೂರ್ನಿಯುದ್ದಕ್ಕೂ ಅಜೇಯನಾದ. ಏಳು ಸುತ್ತುಗಳಲ್ಲಿ ಗೆಲುವು, ಎರಡು ಸುತ್ತುಗಳಲ್ಲಿ ಡ್ರಾ ಮಾಡಿಕೊಂಡ.

ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದರು. ಮೊದಲ ನಾಲ್ಕು ಸ್ಥಾನ ಪಡೆದ ಆಟಗಾರರು ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-772560868

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.