ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಕೃಷ್ಣರಾಜಪುರ ತಂಡಗಳು ಕೆಎಸ್ಎಫ್ಎ–ವೈಷ್ಣವಿ ಎರಡನೇ ಆವೃತ್ತಿಯ ಸಿಎಂ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದವು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜರಾಜೇಶ್ವರಿ ತಂಡವು 4–2 ಗೋಲುಗಳಿಂದ ಸಿವಿಆರ್ ನಗರ ತಂಡವನ್ನು ಮಣಿಸಿತು. ಆರ್.ಆರ್. ತಂಡದ ಪರ ಯೂಕ್ ಆಂಥೋನಿ (8ನೇ ಮತ್ತು 11ನೇ) ಹಾಗೂ ರಿವಾಲ್ಡೊ ಜೆ.ಸಿ. (63ನೇ ಮತ್ತು 86ನೇ) ತಲಾ ಎರಡು ಗೋಲು ಗಳಿಸಿದರು. ಸಿವಿಆರ್ ತಂಡದ ಪರ ಖಲೀಲ್ ಯು.ಆರ್. ರೆಹಮಾನ್ (39ನೇ) ಮತ್ತು ಉತ್ತಮ್ ಪ್ರಶಾಂತ್ (90+5ನೇ) ತಲಾ ಒಂದು ಗೋಲು ದಾಖಲಿಸಿದರು.

ಮತ್ತೊಂದು ಕ್ವಾರ್ಟರ್ ಫೈನಲ್ನಲ್ಲಿ ಕೆ.ಆರ್.ಪುರ ತಂಡವು 2–0ಯಿಂದ ಹೆಬ್ಬಾಳ ತಂಡವನ್ನು ಮಣಿಸಿತು. ಕೆ.ಆರ್.ಪುರ ತಂಡದ ಪರ ಸ್ಟೀವ್ ಮ್ಯಾಥ್ಯೂಸ್ (56ನೇ) ಮತ್ತು ತೇಜಸ್ (87ನೇ) ಗೋಲು ದಾಖಲಿಸಿದರು.

ಶುಕ್ರವಾರ ನಡೆಯುವ ಉಳಿದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಶಾಂತಿನಗರ ತಂಡವು ಶಿವಾಜಿನಗರ ವಿರುದ್ಧ; ಸದಾಶಿವನಗರ ತಂಡವು ರಾರಾಜಿನಗರ ತಂಡದ ವಿರುದ್ಧ ಸೆಣಸಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-4-1120679375

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.