ಬೆಂಗಳೂರು: ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್ಐಟಿ) ಪುರುಷರ ತಂಡವು ಗೋವಾದಲ್ಲಿ ಭಾನುವಾರ ಮುಕ್ತಾಯಗೊಂಡ ಅಖಿಲ ಭಾರತ ಅಂತರ ಕಾಲೇಜು ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮಹಿಳೆಯರ ತಂಡವು ರನ್ನರ್ಸ್ಅಪ್ ಆಯಿತು.

ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿಎಸ್) ಆವರಣದಲ್ಲಿ ನಡೆದ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಆರ್ಐಟಿ ತಂಡವು 60–48ರಿಂದ ಆತಿಥೇಯ ಬಿಐಟಿಎಸ್ ತಂಡವನ್ನು ಮಣಿಸಿತು. ಆರ್ಐಟಿ ತಂಡದ ಕನಿಷ್ಕ 22 ಅಂಕ ಗಳಿಸಿದರೆ, ಪ್ರಾಣೇಶ್ (13) ಹಾಗೂ ಧ್ರುವ (12) ಉತ್ತಮ ಬೆಂಬಲ ನೀಡಿದರು. ಬಿಐಟಿಎಸ್ ತಂಡದ ನೀಲ್ (18) ಹಾಗೂ ಪ್ರತೀಕ್ (14) ಹೋರಾಟ ತೋರಿದರು.

ಮಹಿಳೆಯರ ಫೈನಲ್ನಲ್ಲಿ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜು (ಎಲ್ಎಸ್ಆರ್) ತಂಡವು 40–37ರಿಂದ ಆರ್ಐಟಿ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿತು. ಆನವಿ (22 ಅಂಕ) ಎಲ್ಎಸ್ಆರ್ ತಂಡದ ಗೆಲುವಿನಲ್ಲಿ ಮಿಂಚಿದರು. ಆರ್ಐಟಿ ತಂಡದ ಪರ ನಕ್ಷತ್ರ (15) ಹಾಗೂ ಆಧ್ಯಾ ಐತಾಳ್ (10) ಗಮನಾರ್ಹ ಪ್ರದರ್ಶನ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-51-1255453831

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.