ಬೆಂಗಳೂರು: ಆತಿಥೇಯ ಬಸವನಗುಡಿ ಈಜು ಕೇಂದ್ರವು (ಬಿಎಸಿ) ಬುಧವಾರ ಮುಕ್ತಾಯಗೊಂಡ ಎನ್ಆರ್ಜೆ ರಾಜ್ಯ ಸೀನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ತನಿಶಿ ಗುಪ್ತಾ ಅವರಿದ್ದ ಡಾಲ್ಫಿನ್ ಈಜು ಕೇಂದ್ರವು ರನ್ನರ್ಸ್ಅಪ್ ಆಯಿತು.

ಕರ್ನಾಟಕ ಈಜು ಸಂಸ್ಥೆ (ಕೆಎಸ್ಎ) ಆಯೋಜಿಸಿದ್ದ ಈ ಕೂಟದ ಮೂರನೇ ದಿನವೂ ಒಟ್ಟು ಏಳು ದಾಖಲೆಗಳು ನಿರ್ಮಾಣವಾದವು. ಈ ಬಾರಿ ಒಟ್ಟು 17 ಕೂಟ ದಾಖಲೆಗಳು ಮೂಡಿಬಂದವು. ಬಿಎಸಿ ತಂಡವು ಒಟ್ಟು 545 ಅಂಕ ಕಲೆಹಾಕಿದರೆ, ಡಾಲ್ಫಿನ್ ತಂಡಕ್ಕೆ 285 ಅಂಕಗಳು ದೊರೆತವು.

ಕೂಟದುದ್ದಕ್ಕೂ ಅಮೋಘ ಪ್ರದರ್ಶನ ನೀಡಿ, ಎರಡು ದಾಖಲೆ ನಿರ್ಮಿಸಿದ ಬಿಎಸಿಯ ದರ್ಶನ್ ಎಸ್. (43 ಅಂಕ) ಪುರುಷರ ವಿಭಾಗದಲ್ಲಿ ಚಾಂಪಿಯನ್ ಆದರೆ, ಮಹಿಳೆಯರ ವಿಭಾಗದಲ್ಲಿ ತನಿಷಿ (53 ಅಂಕ) ಅವರು ಈ ಗೌರವಕ್ಕೆ ಪಾತ್ರರಾದರು. ತನಿಶಿ ಅವರು ಕೂಟದಲ್ಲಿ ಒಟ್ಟು ಮೂರು ದಾಖಲೆ ಸ್ಥಾಪಿಸಿದರು.

ಬಿಎಸಿಯ ಎಸ್. ಲಕ್ಷ್ಯಾ ಅವರು ಮಹಿಳೆಯರ 200 ಮೀ. ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಯನ್ನು 2 ನಿಮಿಷ 40.86 ಸೆಕೆಂಡುಗಳಲ್ಲಿ ಗುರಿ ತಲುಪಿ, ಕೂಟ ದಾಖಲೆಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು. ಇದೇ ತಂಡದ ಮಣಿಕಂಠ ಎಲ್. ಅವರು ಪುರುಷರ ವಿಭಾಗದ ಇದೇ ಸ್ಪರ್ಧೆಯಲ್ಲಿ ದಾಖಲೆಯೊಡನೆ (2ನಿ., 21.10ಸೆ.) ಚಿನ್ನ ಗೆದ್ದರು.

ಅಮೋಘ ಲಯದಲ್ಲಿರುವ ತನಿಶಿ ಅವರು ಮಹಿಳೆಯರ 50 ಮೀ. ಬಟರ್ಫ್ಲೈ ಸ್ಪರ್ಧೆಯಲ್ಲಿ ಕೂಟ ದಾಖಲೆ (27.92 ಸೆ.) ನಿರ್ಮಿಸಿದರು. ಪುರುಷರ ವಿಭಾಗದಲ್ಲಿ ವಿದಿತ್ ಎಸ್. ಶಂಕರ್ (28.58 ಸೆ.) ಅವರು ಲಿಖಿತ್ ಎಸ್.ಪಿ. (28.69 ಸೆ.) ಅವರ ಹೆಸರಿನಲ್ಲಿದ್ದ ಆರು ವರ್ಷಗಳ ಹಳೆಯ ದಾಖಲೆಯನ್ನು ಮುಳುಗಿಸಿದರು. ದರ್ಶನ್ 200 ಮೀ. ಬಟರ್ಫ್ಲೈ ಸ್ಪರ್ಧೆಯನ್ನು 2 ನಿಮಿಷ 02.57 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ, ಚಿನ್ನದ ಪದಕದೊಂದಿಗೆ ಕೂಟ ದಾಖಲೆಗೂ ಪಾತ್ರರಾದರು.

ತೀಸ್ಯಾ ಸೋನಾರ್, ಅಧಿತಿ ವಿ.ಆರ್., ವಿಹಿತಾ ನಯನ ಹಾಗೂ ಶಿರಿನ್ ಅವರನ್ನೊಳಗೊಂಡ ಬಿಎಸಿ ಎ ತಂಡವು ಮಹಿಳೆಯರ 4x200 ಮೀ. ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ದಾಖಲೆ (8ನಿ., 57.08 ಸೆ.) ಸ್ಥಾಪಿಸಿತು. ಸುವಾನಾ ಸಿ. ಭಾಸ್ಕರ್, ಲಿನೇಶಾ ಎ.ಕೆ., ತನಿಶಿ ಗುಪ್ತ ಹಾಗೂ ದಿನಿಧಿ ದೇಸಿಂಗು ಅವರಿದ್ದ ಡಾಲ್ಫಿನ್ಸ್ ಎ ತಂಡವು ಮಹಿಳೆಯರ 4x100 ಮೀ. ಮೆಡ್ಲೆ ರಿಲೇಯಲ್ಲಿ ಕೂಟ ದಾಖಲೆಯೊಂದಿಗೆ (4 ನಿ., 25.06 ಸೆ.) ಸ್ವರ್ಣಕ್ಕೆ ಮುತ್ತಿಟ್ಟಿತು.

ಫಲಿತಾಂಶಗಳು: ಪುರುಷರು: 50 ಮೀ. ಬಟರ್ಫ್ಲೈ: ಚಿಂತನ್ ಎಸ್.ಶೆಟ್ಟಿ (ಎಲ್ಎಎಸ್) (ಕಾಲ: 25.64ಸೆ.)–1, ಪೃಥ್ವಿ ಎಂ. (ಬಿಎಸಿ)–2, ಹರಿಕಾರ್ತಿಕ್ ವೇಲು (ಜಿ.ಎಫ್)–3; 200 ಮೀ. ಬ್ರೆಸ್ಟ್ಸ್ಟ್ರೋಕ್: ಮಣಿಕಂಠ ಎಲ್. (ಕಾಲ: 2ನಿ., 21.10ಸೆ.)–1, ಸೂರ್ಯ ಜೋಯಪ್ಪ–2, ಡೇನಿಯಲ್ ಪೌಲ್–3 (ಮೂವರೂ ಬಿಎಸಿ); 800 ಮೀ. ಫ್ರೀಸ್ಟೈಲ್: ದರ್ಶನ್ ಎಸ್. (ಕಾಲ: 8ನಿ., 25.18ಸೆ.)–1, ದಕ್ಷಣ್ ಎಸ್.–2, ಶಿವಾಂಕ್ ವಿಶ್ವನಾಥ್–3 (ಮೂವರೂ ಬಿಎಸಿ); 4x100 ಮೀ. ಫ್ರೀಸ್ಟೈಲ್ ರಿಲೇ: ಬಿಎಸಿ ‘ಎ’ (ಕಾಲ: 3ನಿ., 42.48ಸೆ)–1, ಬಿಎಸಿ ‘ಬಿ’–2, ಡಾಲ್ಫಿನ್ಸ್ ‘ಎ’–3; 50 ಮೀ. ಬ್ರೆಸ್ಟ್ಸ್ಟ್ರೋಕ್: ವಿದಿತ್ ಎಸ್. ಶಂಕರ್ (ಡಾಲ್ಫಿನ್) (ಕಾಲ: 28.58 ಸೆ.)–1, ಸೂರ್ಯ ಜೋಯಪ್ಪ–2, ಪೃಥ್ವಿಕ್ ಡಿ.ಎಸ್. (ಇಬ್ಬರೂ ಬಿಎಸಿ)–3; 200 ಮೀ. ಬ್ಯಾಕ್ಸ್ಟ್ರೋಕ್: ಆಕಾಶ್ ಮಣಿ (ಕಾಲ: 2ನಿ., 04.62ಸೆ.)–1, ವೇದಾಂತ ವಿ.ಎಂ.–2 (ಇಬ್ಬರೂ ಬಿಎಸಿ), ಅಮನ್ ಅಭಿಜಿತ್ (ಡಾಲ್ಫಿನ್)–3; 200 ಮೀ. ಬಟರ್ಫ್ಲೈ: ದರ್ಶನ್ (ಕಾಲ: 2 ನಿ. 02.57 ಸೆ.)–1, ಶಿವಾಂಕ್ ವಿಶ್ವನಾಥ್–2, ಅನೀಶ್ ಅನಿರುದ್ಧ ಕೋರೆ–3 (ಮೂವರೂ ಬಿಎಸಿ).

ಮಹಿಳೆಯರು: 50 ಮೀ. ಫ್ರೀಸ್ಟೈಲ್: ಚರಿತಾ ಪಿ. (ಇಎಸ್ಎ) (ಕಾಲ: 26.78ಸೆ.)–1, ರುಜುಲಾ–2, ನೀನಾ ವೆಂಕಟೇಶ್–3 (ಇಬ್ಬರೂ ಡಾಲ್ಫಿನ್); 200 ಮೀ. ಬ್ರೆಸ್ಟ್ಸ್ಟ್ರೋಕ್: ಎಸ್.ಲಕ್ಷ್ಯಾ (ಬಿಎಸಿ) (ಕಾಲ: 2 ನಿ., 40.86 ಸೆ.)–1, ತಾನ್ಯಾ ಎಸ್. (ಜಿಐಆರ್ಎಸ್)–2, ಲಿನೇಶಾ ಎ.ಕೆ. (ಡಾಲ್ಫಿನ್)–3; 50 ಮೀ. ಬಟರ್ಫ್ಲೈ: ತನಿಶಿ ಗುಪ್ತಾ (ಕಾಲ: 27.92ಸೆ.)–1, ನೀನಾ ವೆಂಕಟೇಶ್–2 (ಇಬ್ಬರೂ ಡಾಲ್ಫಿನ್), ಚರಿತಾ ಪಿ. (ಇಎಸ್ಎ)–3; 800 ಮೀ. ಫ್ರೀಸ್ಟೈಲ್: ಶ್ರೀ ಚರಣಿ ಟಿ. (ಜಿಐಆರ್ಎಸ್) (ಕಾಲ: 9ನಿ., 26.23ಸೆ)–1, ದಿನಿಧಿ ದೇಸಿಂಗು (ಡಾಲ್ಫಿನ್)–2, ಅದಿತಿ ಎನ್.ಎಂ. (ಬಿಎಸಿ)–3; 4x100 ಮೀ. ಮೆಡ್ಲೆ ರಿಲೇ: ಡಾಲ್ಫಿನ್ ‘ಎ’ (ಕಾಲ: 4ನಿ.25.06ಸೆ.)–1, ಬಿಎಸಿ ‘ಎ’–2, ಡಾಲ್ಫಿನ್ ‘ಬಿ’–3.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-1012176102

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.