ಬೆಂಗಳೂರು: ಆತಿಥೇಯ ಬಸವನಗುಡಿ ಈಜು ಕೇಂದ್ರದ ದರ್ಶನ್ ಎಸ್. ಮತ್ತು ಡಾಲ್ಫಿನ್ ಈಜು ಕೇಂದ್ರದ ದಿನಿಧಿ ದೇಸಿಂಗು ಅವರು ಇಲ್ಲಿ ಸೋಮವಾರ ಆರಂಭಗೊಂಡ ಕೆಎಸ್ಎ ರಾಜ್ಯ ಸೀನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಸಾಧನೆ ಮಾಡಿದರು.

ಬಸವನಗುಡಿ ಈಜು ಕೇಂದ್ರದಲ್ಲಿ (ಬಿಎಸಿ) ನಡೆದ ಪುರುಷರ 400 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ದರ್ಶನ್ 3 ನಿಮಿಷ 59.07ಸೆಕೆಂಡ್ಗಳಲ್ಲಿ ಗುರಿ ತಲುಪಿ, ಅನೀಶ್ ಎಸ್.ಗೌಡ ಹೆಸರಿನಲ್ಲಿದ್ದ ದಾಖಲೆಯನ್ನು ಮುಳುಗಿಸಿದರು.

ಒಲಿಂಪಿಯನ್ ದಿನಿಧಿ ಅವರು ಮಹಿಳೆಯರ 200 ಮೀ. ಫ್ರೀಸ್ಟೈಲ್ನಲ್ಲಿ (2ನಿಮಿಷ 04.20ಸೆ) ತಮ್ಮದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡರು. ಬಿಎಸಿಯ ಪೃಥ್ವಿ ಎಂ. ಅವರು ಪುರುಷರ 50 ಮೀ. ಫ್ರೀಸ್ಟೈಲ್ನಲ್ಲಿ 23.97 ಸೆಕೆಂಡುಗಳಲ್ಲಿ ಗುರಿ ತಲುಪಿ, ಚಾಂಪಿಯನ್ಷಿಪ್ನ ವೇಗದ ಈಜುಪಟುವಾಗಿ ಹೊರಹೊಮ್ಮಿದರು.

ಏತನ್ಮಧ್ಯೆ, 79ನೇ ಸೀನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ಷಿಪ್ ಜೂನ್ 16ರಿಂದ 21 ರವರೆಗೆ ಅಹಮದಾಬಾದ್ನ ವೀರ್ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿವೆ ಎಂದು ಭಾರತೀಯ ಈಜು ಫೆಡರೇಷನ್ ದೃಢಪಡಿಸಿದೆ.

ಫಲಿತಾಂಶ: ಪುರುಷರು: 50 ಮೀ. ಫ್ರೀಸ್ಟೈಲ್: ಪೃಥ್ವಿ ಎಂ. (ಬಿಎಸಿ, ಕಾಲ: 23.97ಸೆ)–1, ಹರಿಕಾರ್ತಿಕ್ ವೇಲು (ಜಿ.ಎಫ್)–2, ಆರ್.ನವನೀತ್ ಗೌಡ (ಡಿ.ಎ)–3. 50 ಮೀ. ಬ್ಯಾಕ್ಸ್ಟ್ರೋಕ್: ಶ್ರೀಹರಿ ನಟರಾಜ್ (ಡಿ.ಎ, ಕಾಲ:25.86ಸೆ)–1, ಆಕಾಶ್ ಮಣಿ (ಬಿಎಸಿ)–2, ಇದಾಂತ್ ಶಾಶ್ವತ್ ಚತುರ್ವೇದಿ (ಬಿಎಸಿ)–3; 100 ಮೀ.ಫ್ರೀಸ್ಟೈಲ್: ಅನೀಶ್ ಎಸ್.ಗೌಡ (ಬಿಎಸಿ, ಕಾಲ: 51.40ಸೆ)–1, ಆಕಾಶ್ ಮಣಿ–2, ಚಿಂತನ್ ಎಸ್.ಶೆಟ್ಟಿ (ಎಲ್ಎಎಸ್)–3; 100 ಮೀ. ಬ್ಯಾಕ್ಸ್ಟ್ರೋಕ್: ಆಕಾಶ್ ಮಣಿ (ಕಾಲ: 58.13ಸೆ)–1, ಸಮರ್ಥ್ ಗೌಡ ಬಿ.ಎಸ್. (ಬಿಎಸಿ)–2, ವೇದಾಂತ ವಿ.ಎಂ. (ಬಿಎಸಿ)–3; 100 ಮೀ. ಬ್ರೆಸ್ಟ್ಸ್ಟ್ರೋಕ್: ವಿದಿತ್ ಎಸ್. ಶಂಕರ್ (ಡಿ.ಎ, ಕಾಲ: 1ನಿ.04.81ಸೆ)–1, ಮಣಿಕಂಠ ಎಲ್ (ಬಿಎಸಿ)–2, ಸೂರ್ಯ ಜೋಯಪ್ಪ ಒ.ಆರ್ (ಬಿಎಸಿ)–3; 400 ಮೀ. ಫ್ರೀಸ್ಟೈಲ್: ದರ್ಶನ್ ಎಸ್. (ಬಿಎಸಿ, ಕಾಲ: 3ನಿ.59.07ಸೆ)–1, ದಕ್ಷಣ್ ಎಸ್. (ಬಿಎಸಿ)–2, ಅನೀಶ್ ಎಸ್. ಗೌಡ (ಬಿಎಸಿ)–3; 200 ಮೀ. ವೈಯಕ್ತಿಕ ಮೆಡ್ಲೆ: ಶೋನ್ ಗಂಗೂಲಿ (ಬಿಎಸಿ, ಕಾಲ: 2ನಿ.08.55ಸೆ)–1, ಚಿಂತನ್ ಎಸ್.ಶೆಟ್ಟಿ (ಎಲ್ಎಎಸ್)–2, ಸೂರ್ಯ ಜೋಯಪ್ಪ–3. 4x200 ಫ್ರೀಸ್ಟೈಲ್ ರಿಲೇ: ಬಿಎಸಿ–ಎ (8ನಿ.01.63ಸೆ)–1, ಬಿಎಸಿ–ಬಿ (8 ನಿ.02.89ಸೆ)–2, ಡಾಲ್ಫಿನ್ ಅಕ್ವಾಟಿಕ್ಸ್–ಎ (8 ನಿ.06.09ಸೆ)–3.

ಮಹಿಳೆಯರು: 50 ಮೀ. ಬ್ಯಾಕ್ಸ್ಟ್ರೋಕ್: ಸುವನಾ ಸಿ ಭಾಸ್ಕರ್ (ಡಿ.ಎ, ಕಾಲ: 30.19ಸೆ)–1, ವಿಹಿತಾ ನಯನಾ (ಬಿಎಸಿ)–2, ನೈಶಾ (ಬಿಎಸಿ)–3; 50 ಮೀ. ಬ್ರೆಸ್ಟ್ ಸ್ಟ್ರೋಕ್: ಎಸ್.ಲಕ್ಷ್ಯಾ (ಬಿಎಸಿ, ಕಾಲ: 33.74ಸೆ)–1, ಲಿನೇಷಾ ಎ.ಕೆ. (ಡಿ.ಎ)–2, ಮಾನವಿ ವರ್ಮಾ (ಡಿ.ಸಿ)–3; 200 ಮೀ. ಫ್ರೀಸ್ಟೈಲ್: ದಿನಿಧಿ ದೇಸಿಂಗು (ಡಿ.ಎ, ಕಾಲ: 2ನಿ.04.20ಸೆ)–1, ಶ್ರೀಚರಣಿ ತುಮು (ಜೆಐಆರ್ಎಸ್)–2, ಸುಹಾಸಿನಿ ಘೋಷ್ (ಕೆಎಸ್ಎ)–3; 200 ಮೀ. ಬಟರ್ಫ್ಲೈ: ಸುಹಾನಿಸಿ ಘೋಷ್ (ಕಾಲ: 2ನಿ.29.60ಸೆ)–1, ಎಸ್.ಲಕ್ಷ್ಯಾ–2, ಅಂಜಲಿ ಹೊಸಕೆರೆ (ಬಿಎಸಿ)–3; 200 ಮೀ. ವೈಯಕ್ತಿಕ ಮೆಡ್ಲೆ: ತನಿಶಿ ಗುಪ್ತಾ (ಡಿ.ಎ, ಕಾಲ: 2ನಿ.22.76ಸೆ)–1, ದಿನಿಧಿ ದೇಸಿಂಗು–2, ತಾನ್ಯಾ ಎಸ್ (ಜೆಐಆರ್ಎಸ್)–3; 1500 ಮೀ. ಫ್ರೀಸ್ಟೈಲ್: ಶ್ರೀಚರಣಿ ತುಮು (ಕಾಲ: 18ನಿ.06.18ಸೆ)–1, ಅದಿತಿ ಎನ್. ಮುಲೈ (ಬಿಎಸಿ)–2, ಶಿರಿನ್ (ಬಿಎಸಿ)–3; 4x100 ಫ್ರೀಸ್ಟೈಲ್ ರಿಲೇ: ಡಾಲ್ಫಿನ್ ಅಕ್ವಾಟಿಕ್ಸ್–ಎ (3ನಿ.58.72ಸೆ)–1, ಬಿಎಸಿ–ಎ (4ನಿ.07.55ಸೆ)–2, ಡಾಲ್ಫಿನ್ ಅಕ್ವಾಟಿಕ್ಸ್– ಬಿ (4ನಿ.09.37ಸೆ)–3.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-51-637125283

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.