ಬೆಂಗಳೂರು: ನಗರದಲ್ಲಿ ಇದೇ ಭಾನುವಾರ (ಏ.26) ನಡೆಯಲಿರುವ 18ನೇ ಆವೃತ್ತಿಯ ಟಿಸಿಎಸ್ ಟೆನ್ ಕೆ ಓಟದ ಮಾರ್ಗ ದಿಕ್ಸೂಚಿಯನ್ನು ಬುಧವಾರ ಬಿಡುಗಡೆ ಮಾಡಲಾಯಿತು.

36 ಸಾವಿರಕ್ಕೂ ಅಧಿಕ ಅಥ್ಲೀಟ್ಗಳು ಪಾಲ್ಗೊಳ್ಳುತ್ತಿರುವ ಈ ಬಾರಿಯ ಕೂಟದ ಮಾರ್ಗ ದಿಕ್ಸೂಚಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.

ಕಬ್ಬನ್ ರಸ್ತೆಯಲ್ಲಿ ಮುಂಜಾನೆ 5.30ಕ್ಕೆ ಎಲೀಟ್ ಮಹಿಳೆಯರ 10 ಕಿ.ಮೀ ಓಟದೊಂದಿಗೆ ಸ್ಪರ್ಧೆಗಳಿಗೆ ಚಾಲನೆ ಸಿಗಲಿದೆ. 10ಕೆ ಓಟವು ಕಬ್ಬನ್ ರಸ್ತೆಯಿಂದ ಆರಂಭವಾಗಿ ಹಲಸೂರು ಕೆರೆಯನ್ನು ಸುತ್ತು ಹಾಕಿ, ಅಲ್ಲಿಂದ ಡಿಕೆನ್ಸನ್ ರಸ್ತೆ, ಕಾಮರಾಜ ರಸ್ತೆಯ ಮೂಲಕ ಸಾಗಿ ಪುನಃ ಕಬ್ಬನ್ ರಸ್ತೆಗೆ ಸೇರಲಿದೆ. ಅಲ್ಲಿಂದ ವಿಧಾನಸೌಧದ ಮುಂಭಾಗದಲ್ಲಿ ‘ಯು ಟರ್ನ್’ ಪಡೆದು, ಕ್ವೀನ್ಸ್ ರಸ್ತೆಯನ್ನು ಸುತ್ತುಹಾಕಿ ಮಾಣೆಕ್ಶಾ ಪರೇಡ್ ಮೈದಾನದ ಮುಂಭಾಗದಲ್ಲಿ ಸಂಪನ್ನಗೊಳ್ಳಲಿದೆ.

‘ಕಳೆದ ವರ್ಷ ಹಲಸೂರು ಕೆರೆಯ ಬಳಿ ಹಾಗೂ ಕೆ.ಆರ್.ವೃತ್ತದಲ್ಲಿ ‘ಯು ಟರ್ನ್’ ಪಡೆಯಬೇಕಿತ್ತು. ಆದರೆ, ಇಕ್ಕಟ್ಟಾದ ಜಾಗದಲ್ಲಿ ‘ಯು ಟರ್ನ್’ ಪಡೆಯಲು ಅಥ್ಲೀಟ್ಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಹೀಗಾಗಿ, ಈ ಬಾರಿ ಮಾರ್ಗ ದಿಕ್ಸೂಚಿಯಲ್ಲಿ ಬದಲಾವಣೆ ಮಾಡಲಾಗಿದೆ’ ಎಂದು ಪ್ರೊಕ್ಯಾಮ್ ಇಂಟರ್ನ್ಯಾಷನಲ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ತಿಳಿಸಿದರು.

‘10ಕೆ ಓಟಕ್ಕೆ 22,189 ಸ್ಪರ್ಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.ಸಾಮಾಜಿಕ ಒಳಿತಿಗಾಗಿ ₹5 ಕೋಟಿ ದೇಣಿಗೆ ಸಂಗ್ರಹಿಸಲಾಗಿದೆ’ ಎಂದರು.

ಏ.26ರಂದು ಮುಂಜಾನೆ 3.20ರಿಂದಲೇ ಮೆಟ್ರೊ ರೈಲು ಸೇವೆಗಳು ಆರಂಭವಾಗಲಿವೆ ಎಂದೂ ಅವರು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-43-149549647

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.