ಭಟ್ಕಳ: ಬೆಳಕೆಯ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ 2 ದಿನ ನಡೆದ ವೆಂಕಟೇಶ್ವರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಪಶುಪತಿ ಸೇನಾ ತಂಡವು ಕಿಟ್ಟ ಇಲೆವೆನ್ಸ್ ತಂಡವನ್ನು 14 ರನ್ಗಳಿಂದ ಸೋಲಿಸಿ ₹25,555 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಡಿತು. ದ್ವಿತೀಯ ಸ್ಥಾನ ಪಡೆದ ಕಿಟ್ಟ ಇಲೆವೆನ್ಸ್ ತಂಡವು ₹18,555 ನಗದು ಹಾಗೂ ಟ್ರೋಫಿ ಪಡೆಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀ ಪಶುಪತಿ ಸೇನಾ ತಂಡವು 8 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 107 ರನ್ನು ಗಳಿಸಿತು. ಕಿಟ್ಟ ಬಾಯ್ಸ್ ತಂಡವು 8 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ 14 ರನ್ಗಳಿಂದ ಸೋಲು ಅನುಭವಿಸಿತು.

ಶ್ರೀ ಪಶುಪತಿ ತಂಡದಲ್ಲಿ ಆರಂಭಿಕ ಆಟಗಾರನಾಗಿ ಬಂದ ನವೀನ್ ನಾಯ್ಕ 72 ರನ್ ಹಾಗೂ ಮಾರುತಿ ನಾಯ್ಕ 18 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಕಿಟ್ಟ ಇಲೆವೆನ್ಸ್ ತಂಡದಲ್ಲಿದ್ದ ಆರಂಭಿಕ ಆಟಗಾರನಾದ ಸಚೀನ್ ನಾಯ್ಕ 35 ರನ್ ಹಾಗೂ ಅಣ್ಣಪ್ಪ ಶೇಟ್ 22 ರನ್ ಕೂಡಿಸಿದರಾದರೂ ಉಳಿದ ಆಟಗಾರರು ಬೇಗ ಔಟಾದ ಕಾರಣ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

ಒಟ್ಟು ಆಯ್ದ 6 ತಂಡಗಳು ಭಾಗವಹಿಸಿದ್ದವು. ಟೂರ್ನಿಯಲ್ಲಿ ಶ್ರೇಷ್ಠ ಆಟಗಾರನಾಗಿ ಶ್ರಿ ಪಶುಪತಿ ತಂಡದ ನವೀನ ನಾಯ್ಕ ಪ್ರಶಸ್ತಿ ಪಡೆದರು. ಉತ್ತಮ ಎಸೆತಗಾರನಾಗಿ ಶ್ರೀ ವೆಂಕಟೆಶ್ವರ ಇಲೆವನ್ಸ್ ತಂಡದ ರವಿ ನಾಯ್ಕ ಉತ್ತಮ ಬ್ಯಾಟ್ಸಮನ್ ಆಗಿ, ಕಿಟ್ಟ ಬಾಯ್ಸ್ ತಂಡದ ಸಚಿನ್ ನಾಯ್ಕ ಪ್ರಶಸ್ತಿಗೆ ಪಾತ್ರರಾದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ, ನಾಮಧಾರಿ ಅಬಿವೃದ್ದಿ ಸಂಘದ ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಪತ್ರಕಕರ್ತ ಮನಮೋಹನ ನಾಯ್ಕ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಬಿ.ಜೆ.ಪಿ. ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ವೆಂಕಟೇಶ್ವರ ಪತ್ತಿನ ಸಂಘದ ನಿರ್ದೇಶಕ ಮಹೇಶ ನಾಯ್ಕ, ಇಝೋನ್ ಕಂಪನಿಯ ಮಾಲಕ ಗಣಪತಿ ಸೋಡಿಗದ್ದೆ, ಪ್ರಕಾಶ ನಾಯ್ಕ, ಭಾಸ್ಕರ ನಾಯ್ಕ, ಸಂದೀಪ ಶೇಟ್, ವೆಂಕಟೇಶ ಮೊಗೇರ, ಜಯರಾಮ ಮಹಾಲೆ, ಶಿವಾನಂದ ಮಡಿವಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-20-1986000212

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.