ಬ್ರಹ್ಮಾವರ: ಫ್ರೆಂಡ್ಸ್ ವಡ್ಡರ್ಸೆ ಸಂಸ್ಥೆ ವತಿಯಿಂದ ಕರ್ನಾಟಕ ರಾಜ್ಯ 19 ವಯೋಮಿತಿಯೊಳಗಿನ ಕ್ರಿಕೆಟ್ ತಂಡದ ನಾಯಕಿ ರಚಿತಾ ಹತ್ವಾರ್ ಅವರಿಗೆ ಅಭಿನಂದನಾ ಸಮಾರಂಭ ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈಚೆಗೆ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಚಿತಾ ಹತ್ವಾರ್, ಕ್ರಿಕೆಟ್ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ, ನಮ್ಮ ಊರು ಹಾಗೂ ನಮ್ಮವರಿಗೆ ಒಳ್ಳೆಯ ಹೆಸರು ತರುವುದೇ ನನ್ನ ಕನಸು ಎಂದರು.

ಫ್ರೆಂಡ್ಸ್ ವಡ್ಡರ್ಸೆ ಸಂಸ್ಥೆ ಅಧ್ಯಕ್ಷ ತೀರ್ಥನ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಚಂದ್ರ ಶೆಟ್ಟಿ ಯಾಳಕ್ಲು, ಸಚ್ಚಿದಾನಂದ ಅಡಿಗ, ಅವಿನಾಶ್ ಪೂಜಾರಿ, ಅರುಣಾ ಭಟ್, ವಿಶಾಲ ಇದ್ದರು.

ರಚಿತಾ ಹತ್ವಾರ್ ಅವರ ತಂದೆ ರಮೇಶ್ ಹತ್ವಾರ್ ಹಾಗೂ ತಾಯಿ ಸರಿತಾ ಹತ್ವಾರ್ ಇದ್ದರು. ಸತೀಶ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-28-1634677642

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.