ಚಾಮರಾಜನಗರ: ಜೈಭೀಮ್ ಕ್ರಿಕೆಟ್ ಕ್ಲಬ್ ವತಿಯಿಂದ ನಗರದ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಜೈ ಭೀಮ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಳ್ಳೇಗಾಲ ತಾಲ್ಲೂಕಿನ ‘ಭೀಮ ಫೈಟರ್ಸ್’ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಪೈನಲ್ ಪಂದ್ಯದಲ್ಲಿ ಜೈ ಭೀಮ್ ಕ್ರಿಕೆಟ್ ಕ್ಲಬ್ ಲಯನ್ಸ್ ತಂಡದ ವಿರುದ್ಧ ಜಯಗಳಿಸಿದ ಭೀಮ ಫೈಟರ್ಸ್ ತಂಡ ಪ್ರಥಮ ಬಹುಮಾನವಾಗಿ ₹ 1 ಲಕ್ಷ ನಗದು ಪುರಸ್ಕಾರ ಹಾಗೂ ಟ್ರೋಫಿ ಪಡೆಯಿತು. ಜೈ ಭೀಮ್ ಕ್ರಿಕೆಟ್ ಕ್ಲಬ್ ಲಯನ್ಸ್ ತಂಡ ದ್ವಿತೀಯ ಸ್ಥಾನದೊಂದಿಗೆ ಟ್ರೋಫಿ, ₹50,000 ನಗದು ಬಹುಮಾನ ಪಡೆಯಿತು.

ಭೀಮ ಫೈಟರ್ಸ್ ತಂಡದ ಸಂಜಯ್ ಪಂದ್ಯಪುರುಷ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಪ್ರಶಾಂತ ಮುದ್ದು ಉತ್ತಮ ಬಾಟ್ಸ್ಮನ್ ಪ್ರಶಸ್ತಿ ಹಾಗೂ ಸಂಜು ಉತ್ತಮ ಬೌಲರ್ ಪ್ರಶಸ್ತಿ ಪಡೆದುಕೊಂಡರು.

ಮೂರು ದಿನ ನಡೆದ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯ ಕ್ರೀಡಾಪ್ರೇಮಿಗಳು ನೆರೆದಿದ್ದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಚೆಲುವರಾಜು ಭಾಗವಹಿಸಿದ್ದರು.

ವಕೀಲ ಪ್ರಸನ್ನ ಕುಮಾರ್, ಉದ್ಯಮಿ ಶ್ರೀನಿಧಿ ಕುದರ್, ಕರ್ನಾಟಕ ಸರ್ಕಾರಿ ನೌಕರರ ಸಂಘದ ಮಹದೇವ, ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಮುರುಳಿ, ಸಿದ್ದರಾಜಪ್ಪ, ಸೋಮಶೇಖರ್, ಶಿವಪ್ರಸಾದ್, ತೇಜು, ಭರತ್, ಆಯೋಜಕರಾದ ಲೋಕೇಶ್, ಮಲ್ಲೇಶ್, ಹರೀಶ್, ಶಿವಕುಮಾರ್, ಸೋಮೇಶ್ವರ, ಮೋಹನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-37-447461074

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.