ಚನ್ನರಾಯಪಟ್ಟಣ: ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವ ದಿವಂಗತ ಎಚ್.ಸಿ.ಶ್ರೀಕಂಠಯ್ಯ ಜನ್ಮಶತಮಾನೋತ್ಸವದ ಅಂಗವಾಗಿ ತಾಲ್ಲೂಕಿನ ಶ್ರೀಕಂಠಯ್ಯ ಸೇವಾ ಸಮಿತಿ ವತಿಯಿಂದ ಜೂನ್ 5 ರಿಂದ ಮೂರು ದಿನ ರಾಷ್ಟ್ರಮಟ್ಟದ ಹೊನಲುಬೆಳಕಿನ ವಾಲಿಬಾಲ್ ಟೂರ್ನಿ ಏರ್ಪಡಿಸಲಾಗಿದೆ ಎಂದು ಸೇವಾಸಮಿತಿ ಅಧ್ಯಕ್ಷ ವಿ.ಜಿ. ಅಶೋಕ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ವಾಲಿಬಾಲ್ ಟೂರ್ನಿ ಕುರಿತು ಏರ್ಪಡಿಸಿದ್ದ ಸೇವಾಸಮಿತಿ ಸದಸ್ಯರು ಮತ್ತು ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಟೂರ್ನಿ ಏರ್ಪಡಿಸಲಾಗಿದೆ. ರಾಜ್ಯ ಕಂಡ ಧೀಮಂತ ನಾಯಕ ಶ್ರೀಕಂಠಯ್ಯ ಅವರ 100ನೇ ವರ್ಷದ ಜನ್ಮದಿನಾಚರಣೆಯನ್ನು ತಾಲ್ಲೂಕಿನಲ್ಲಿ ಅವರ ಕುಟುಂಬವರ್ಗ ಮತ್ತು ಶ್ರೀಕಂಠಯ್ಯ ಅಭಿಮಾನಿಗಳು, ಕಾರ್ಯಕರ್ತರು ಆಚರಿಸಲು ನಿರ್ಧರಿಸಿದ್ದು, ಶ್ರೀಕಂಠಯ್ಯ ಅವರ ಮೊಮ್ಮಗ ಮತ್ತು ಕರ್ನಾಟಕ ವಿದ್ಯುಚ್ಛಕ್ತಿ ಕಾರ್ಖಾನೆಯ ಅಧ್ಯಕ್ಷ ಎಚ್.ಸಿ. ದೀಪು ಈಗಾಗಲೇ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಅಯೋಜನೆ ಮಾಡಿದ್ದಾರೆ ಎಂದರು.

ತಾಲ್ಲೂಕಿನ ವಿದ್ಯಾವಂತ ನಿರುದ್ಯೋಗಿಗಳು ಕೆಲಸ ಪಡೆಯಲು ನೆರವಾಗಲು 2 ಸಾವಿರ ಯುವಜನರಿಗೆ ಕೌಶಲ ತರಬೇತಿ, ಇಂಗ್ಲಿಷ್ ಕಲಿಕೆ ತರಬೇತಿ, ಕಂಪ್ಯೂಟರ್ ಕಲಿಕೆಯಂತಹ ತರಬೇತಿ ಕಾರ್ಯಕ್ರಮಗಳು, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಗುಡಿಕೈಗಾರಿಕೆಗಳ ತರಬೇತಿ ನೀಡಿ ಅರ್ಥಿಕ ನೆರವು ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಜೂನ್ 5 ರಿಂದ 7ರವರೆಗೆ ಮೂರು ದಿನ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿ ಏರ್ಪಡಿಸಲಾಗಿದೆ. ಟೂರ್ನಿ ರೂಪುರೇಷೆಗಳ ಕುರಿತು ಈಗಾಗಲೇ ದೀಪು ಅವರ ಜತೆ ಚರ್ಚಿಸಲಾಗಿದ್ದು, ತಂಡಗಳ ಜೆರ್ಸಿ ಅನಾವರಣಗೊಳಿಸಲಾಗಿದೆ ಎಂದು ತಿಳಿಸಿದರು.

ಸೇವಾ ಸಮಿತಿ ನಿರ್ದೇಶಕ, ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯ ಮಿಲ್ಟ್ರಿಮಂಜು ಮಾತನಾಡಿ, ಟೂರ್ನಿಯಲ್ಲಿ ದೇಶದ ಹಲವು ರಾಜ್ಯಗಳಿಂದ ಆಯ್ದ ಅತ್ಯುತ್ತಮ ತಂಡಗಳು ಭಾಗಿಯಾಗಲಿವೆ. ಹೊನಲು ಬೆಳಕಿನ ಟೂರ್ನಿಯಾಗಿದ್ದು, ಮೊದಲನೇ ಬಹುಮಾನ ₹1.50 ಲಕ್ಷ , ದ್ವಿತೀಯ ಬಹುಮಾನ ₹1.40 ಲಕ್ಷ , ತೃತೀಯ ಬಹುಮಾನ ₹1.30 ಲಕ್ಷ ಮತ್ತು ನಾಲ್ಕನೇ ಬಹುಮಾನವಾಗಿ ₹1.20 ಲಕ್ಷ ರೂ. ನೀಡಲಾಗುವುದು ಎಂದರು. ಪದಾಧಿಕಾರಿಗಳಾದ ಎಚ್.ಜಿ. ಮಂಜೇಗೌಡ, ಗೋವಿಂದರಾಜು, ಗಿರೀಶ್, ಎಚ್.ಎಂ. ಜಯರಾಂ, ಸಿ.ಟಿ. ರಮೇಶ್, ಶಿವಸ್ವಾಮಿ, ವಿಶ್ವನಾಥ್, ಸಿ.ಟಿ. ಅಶೋಕ್ಕುಮಾರ್, ಸುಜಾತ, ಉಮಾಶಂಕರ್, ಕೆ.ಜಿ. ಬಾಬು. ಗನ್ನಿ ಗಿರೀಶ್, ರುದ್ರೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-36-1121742346

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.