ಕುದುರೆಗುಂಡಿ (ನರಸಿಂಹರಾಜಪುರ): ತಾಲ್ಲೂಕಿನ ಗಡಿಭಾಗದ ಕುದುರೆಗುಂಡಿಯ ಸರ್ಕಾರಿ ಪ್ರೌಢ ಶಾಲೆಯ ಆಟದ ಮೈದಾನದಲ್ಲಿ ಈಚೆಗೆ ಶೃಂಗೇರಿ ಶಿಷ್ಯ ಮಲೆನಾಡ ಹೆಬ್ಬಾರ ಬ್ರಾಹ್ಮಣ ಸಭಾದ ನರಸಿಂಹರಾಜಪುರ ಘಟಕ ಹಾಗೂ ಯುವ ಬಳಗದ ಸಹಯೋಗದಲ್ಲಿ ಹೆಬ್ಬಾರ ಕ್ರಿಕೆಟ್ ಲೀಗ್ ಶ್ರೀಪಾದ ಕಪ್ ಟೂರ್ನಿ ಮುಕ್ತಾಯಗೊಂಡಿತು.

ಹೊಸನಗರ ತಂಡ ಪ್ರಥಮ, ಹೊಕ್ಕಳಿಕೆ ತಂಡ ದ್ವಿತೀಯ ಸ್ಥಾನ ಪಡೆಯಿತು. ಕ್ರಿಕೆಟ್ ಟೂರ್ನಿಯಲ್ಲಿ ವಿವಿಧ ಜಿಲ್ಲೆಗಳ ಒಟ್ಟು 13 ತಂಡಗಳು ಭಾಗವಹಿಸಿದ್ದವು. ಗೆದ್ದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿಯ ಗೌರವ ಅಧ್ಯಕ್ಷ ಜಿ.ಸಿ. ಗೋಪಾಲಕೃಷ್ಣ, ನಮ್ಮ ಸಂಘಟನೆಯು 20 ವರ್ಷದ ಹಿಂದೆ ಆರಂಭವಾಗಿದ್ದು ಯುವಕರು ಸಂಘಟನೆಯ ಆಶಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿ ಅಧ್ಯಕ್ಷ ಕೋಟೆತೋಟ ವಿಜಯರಂಗ ಮಾತನಾಡಿ, ಕ್ರೀಡಾ ಕೂಟದಲ್ಲಿ ಕಾಣಿಸಿಕೊಂಡ ಯುವ ಶಕ್ತಿಯು ಭವಿಷ್ಯದಲ್ಲಿ ನಮ್ಮ ಸಂಘಟನೆಯ ಶಕ್ತಿಯೂ ಆಗಿದೆ. ನಮ್ಮ ಸಮಾಜವು ಯುವ ಶಕ್ತಿಯನ್ನು ಪೂರಕವಾಗಿ ಬಳಸಿಕೊಳ್ಳಲಿದೆ. ಎಂದರು.

ಶಿವಮೊಗ್ಗ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕಿ ಸಂದ್ಯಾ ಶ್ರೀನಾಥ್ ಮಾತನಾಡಿದರು.

ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ, ನರಸಿಂಹರಾಜಪುರ ಘಟಕದ ಅಧ್ಯಕ್ಷ ಎ.ವಿ. ಪ್ರಶಾಂತ್, ಕೊಪ್ಪದ ಯಡಗೆರೆ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್ ಅಧ್ಯಕ್ಷ ವೈ.ಎಸ್. ಸುಬ್ರಹ್ಮಣ್ಯ, ಕೆ.ವಿ. ಪ್ರಭಾಕರ್, ಎ.ಎಸ್. ವೆಂಕಟರಮಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-126-1654723786

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.