ಪಡುಬಿದ್ರಿ: ಎಂ-11 ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್ ಆಶ್ರಯದಲ್ಲಿ ಹೆಜಮಾಡಿಯ ರಾಜೀವ್ಗಾಂಧಿ ಮೈದಾನದಲ್ಲಿ ನಡೆದ ಕಾರ್ಪೊರೇಟ್ ಕ್ರಿಕೆಟ್ ಲೀಗ್ನಲ್ಲಿ ಪಾರಾದೀಪ್ ತಂಡ ಟ್ರೋಫಿಯನ್ನು ಗೆದ್ದುಕೊಂಡಿತು.

ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಕಾರ್ಪೊರೇಟ್ ತಂಡಗಳಿಗಾಗಿ ನಡೆದ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಮಣಿಪಾಲ ಮಾಹೆ ತಂಡವನ್ನು ಪಾರಾದೀಪ್ ತಂಡ ಸೋಲಿಸಿ ಟ್ರೋಫಿ ಹಾಗೂ ₹33,333 ನಗದು, ರನ್ನರ್ಅಪ್ ಆದ ಮಾಹೆ ತಂಡವು ₹22,222 ನಗದನ್ನು ಪಡೆದುಕೊಂಡಿತು.

ಮಾಹೆ ತಂಡದ ರಕ್ಷಿತ್ ಸರಣಿ ಶ್ರೇಷ್ಠ ಪ್ರಶಸ್ತಿ, ಪಾರಾದೀಪ್ ತಂಡದ ಅರ್ಜುನ್ ಮ್ಯಾನ್ ಆಫ್ ದಿ ಮ್ಯಾಚ್, ಪಾರಾದೀಪ್ ತಂಡದ ಶ್ರವಣ್ ಬೆಸ್ಟ್ ಬ್ಯಾಟ್ಸ್ಮನ್, ಸೆನ್ಝೈನ್ ತಂಡದ ಸಂತೋಷ್ ಉತ್ತಮ ಫೀಲ್ಡರ್, ಎಂ11 ತಂಡದ ಗುರು ಬೆಸ್ಟ್ ಕೀಪರ್ ಪ್ರಶಸ್ತಿ ಪಡೆದುಕೊಂಡರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಅಸ್ಪೆನ್ ಎಸ್ಇಜೆಡ್ ಮುಖ್ಯಸ್ಥ ಅಶೋಕ್ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ಚಂದ್ರ ಜೆ. ಶೆಟ್ಟಿ, ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಮೀದ್ ಪಡುಬಿದ್ರಿ, ಯಶೋಧರ ಶೆಟ್ಟಿ, ಎಂ11 ಸಂಸ್ಥೆಯ ಎಚ್ಆರ್ ಮ್ಯಾನೇಜರ್ ಅನಿಲ್ ಪಾಲನ್, ಟರ್ಮಿನಲ್ ಮುಖ್ಯಸ್ಥ ಮಧು, ಕಾರ್ತಿಕ್, ರಮ್ಯಾ, ಲತೇಶ್, ಕಬೀರ್, ಶರಣ್, ರಜತ್ ಉಪಸ್ಥಿತರಿದ್ದರು.

ಉದ್ಘಾಟನೆ: ಪಡುಬಿದ್ರಿ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಅನಿಲ್, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಕಿಣಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಶೆಟ್ಟಿ, ಎಂ11 ಕಂಪನಿಯ ಅಧಿಕಾರಿಗಳಾದ ಕುಮಾರ್ ಐಯ್ಯರ್, ಮುರ್ತುಜಾ ಖಾನ್, ಅನಿಲ್ ಪಾಲನ್, ಮಧು ಇದ್ದರು. ಕಾರ್ತಿಕಾ ಸ್ವಾಗತಿಸಿದರು. ಪ್ರಕಾಶ್ ಕೆರೆಮನೆ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-28-434240206

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.