ದಾಂಡೇಲಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ದಾಂಡೇಲಿ ಶಿಕ್ಷಣ ಸಂಸ್ಥೆಯ ಬಂಗೂರನಗರ ಪದವಿ ಕಾಲೇಜು ಮತ್ತು ಆಂತರಿಕ ಭರವಸೆ ಕೋಶ ಸಂಯುಕ್ತ ಆಶ್ರಯದಡಿ ಕ.ವಿ.ವಿ ಅಂತರ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳು ಮಂಗಳವಾರ ನಡೆದವು.

ಪಂದ್ಯಾವಳಿಗೆ ಚಾಲನೆ ನೀಡಿದ ಹಳಿಯಾಳದ ಟೇಬಲ್ ಟೆನಿಸ್ ತರಬೇತಿದಾರ ಉದಯ ಜಾಧವ ಮಾತನಾಡಿ, ‘ಜೀವನದಲ್ಲಿ ಶಿಸ್ತು, ಏಕಾಗ್ರತೆ, ತಾಳ್ಮೆ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ. ಚುರುಕುತನವಿದ್ದಲ್ಲಿ ಮಾತ್ರ ಈ ಟೆನಿಸ್ ಕ್ರೀಡೆಯಲ್ಲಿ ಯಶಸ್ಸು ಪಡೆಯಲು ಸಾಧ್ಯ’ ಎಂದರು.

ಕ್ರೀಡಾಪಟು ನವೀನ ಕಾಮತ್, ‘ಮಾನಸಿಕ ಹಾಗೂ ವ್ಯಕ್ತಿತ್ವ ವಿಕಸನ, ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಸಹಕಾರಿ. ಎಲ್ಲ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ’ ಎಂದು ತಿಳಿಸಿದರು.

ದಾಂಡೇಲಿ ಶಿಕ್ಷಣ ಸಂಸ್ಥೆಯ ಸಂಯೋಜಕ ರಾಘವೇಂದ್ರ ಜೆ.ಆರ್. ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಬಿ.ಎಲ್.ಗುಂಡೂರು ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಪ್ರಕಾಶ ಹೊಸಮನಿ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಪ್ರಜ್ವಲ್ ಸೊಂಟಕ್ಕಿ ಮತ್ತು ಕೀರ್ತಿ ಅಂಕೀಯವರ ಇದ್ದರು.

ದೈಹಿಕ ಶಿಕ್ಷಣ ನಿರ್ದೇಶಕ ವಿನಯ್.ಎಸ್ ಪ್ರಾಸ್ತಾವಿಕ ಮಾತನಾಡಿದರು. ನವ್ಯ ಮುಕ್ಕಣ್ಣ ಮತ್ತು ನಂದಿತಾ, ಮಿಸ್ಕಿನ್ ನಿರೂಪಿಸಿ, ವಂದಿಸಿದರು.

ಫಲಿತಾಂಶ: ಮಹಿಳೆಯರ ವಿಭಾಗದಲ್ಲಿ ಬಂಗೂರನಗರ ಪದವಿ ಕಾಲೇಜು ಪ್ರಥಮ, ಸಿದ್ದಾಪುರ ಎಂಜಿಸಿ ಕಾಲೇಜು ದ್ವಿತೀಯ, ಧಾರವಾಡದ ಕರ್ನಾಟಕ ಕಲಾ ಕಾಲೇಜು ತೃತೀಯ ಹಾಗೂ ಪುರುಷರ ವಿಭಾಗದಲ್ಲಿ ಧಾರವಾಡದ ಜೆ.ಜೆ.ಎಸ್ ಕಾಲೇಜು ಪ್ರಥಮ, ದಾಂಡೇಲಿ ಬಂಗೂರನಗರ ಪದವಿ ಕಾಲೇಜು ದ್ವಿತೀಯ, ಸಿದ್ದಾಪುರದ ಎಂ.ಜಿ.ಸಿ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-20-610554172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.