ದಾವಣಗೆರೆ: ನಗರದ ನಿವಾಸಿ ಮಂಜು ಮೊಗವೀರ್ ಅವರು ಮಧ್ಯಪ್ರದಶದ ಇಂದೋರ್ನಲ್ಲಿ ಈಚೆಗೆ ನಡೆದ 17ನೇ ಸೀನಿಯರ್ ಮಿಸ್ಟರ್ ಇಂಡಿಯಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರನ್ನರ್ಅಪ್ ಸ್ಥಾನ ಪಡೆದು ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ದಾವಣಗೆರೆ ಅಸೋಸಿಯೇಷನ್ ಆಫ್ ಬಾಡಿಬಿಲ್ಡರ್ಸ್ ಸಂಘಟನೆಯ ಮುಖಂಡ ನೂರ್ ಅಹಮದ್ ತಿಳಿಸಿದರು.

ಮಂಜು ಮೊಗವೀರ್ ಅವರು ಟ್ರೋಫಿ ಹಾಗೂ ₹ 50,000 ಬಹುಮಾನ ಪಡೆದಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 380 ಸ್ಪರ್ಧಿಗಳು ಭಾಗವಹಿಸಿದ್ದರು. ಮಂಜು ಮೊಗವೀರ್ ಅವರು 25 ವರ್ಷಗಳಿಂದ ದಾವಣಗೆರೆಯಲ್ಲಿ ನೆಲೆಸಿದ್ದಾರೆ’ ಎಂದರು.

‘ಮಂಜು ಮೊಗವೀರ್ 2015ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಆಲ್ಇಂಡಿಯಾ ಯೂನಿವರ್ಸಿಟಿ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಪಡೆದಿದ್ದರು. 2016ರಲ್ಲಿ ಹಾಂಕಾಂಗ್ನಲ್ಲಿ ನಡೆದ ಮಿಸ್ಟರ್ ಒಲಂಪಿಯಾ ಸ್ಪರ್ಧೆಯಲ್ಲೂ ಪ್ರಶಸ್ತಿ ಪಡೆದಿದ್ದರು ಎಂದು ತಿಳಿಸಿದರು.

ಮಂಜು ಮೊಗವೀರ್, ಸಂಘಟನೆಯ ಪ್ರಮುಖರಾದ ಮಹಮ್ಮದ್ ಜಿಲಾನಿ, ಮಹೇಶ್, ಕೌಶಿಕ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-43-526085098

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.