ದೇವನಹಳ್ಳಿ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಜನ್ಮದಿನ ಹಾಗೂ ಜೆಡಿಎಸ್ ಪಕ್ಷದ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ರಾಜ್ಯ ಮಟ್ಟದ ‘ಜನತಾ ಪ್ರೀಮಿಯರ್ ಲೀಗ್’ (ಜೆಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಜಿಲ್ಲೆಯ ‘ರಣಭೈರೇಗೌಡ ವಾರಿಯರ್ಸ್’ ತಂಡದ ಲಾಂಛನ ಹಾಗೂ ಉಡುಪನ್ನು ಕೊಡಗುರ್ಕಿಯಲ್ಲಿ ಬುಧವಾರ ಅನಾವರಣಗೊಳಿಸಲಾಯಿತು.

ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ವಿ. ಮಂಜುನಾಥ್ ಹಾಗೂ ತಾಲ್ಲೂಕು ಅಧ್ಯಕ್ಷ ಎಸ್. ಮಹೇಶ್ ಅವರು ಜಂಟಿಯಾಗಿ ತಂಡದ ಲೋಗೋ ಬಿಡುಗಡೆ ಮಾಡಿ ಆಟಗಾರರಿಗೆ ಶುಭ ಹಾರೈಸಿದರು.

ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗ ಮತ್ತು ಯುವ ಜನತಾದಳದಿಂದ ಮೇ 15ರಿಂದ 17ರವರೆಗೆ ಬೆಂಗಳೂರಿನ ಮಾದಾವರದ ನೈಸ್ ಮೈದಾನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಕ್ಷದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ತಂಡ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲಲಿ ಎಂದು ನಿಸರ್ಗ ನಾರಾಯಣ ಸ್ವಾಮಿ ಆಶಿಸಿದರು.

ತಂಡದ ನಾಯಕ ಮನು ನೇತೃತ್ವದಲ್ಲಿ ಆಟಗಾರರಾದ ಸಂತೋಷ್, ಎಸ್.ರಾಮ್, ವಿ.ಎಂ.ಬಾಲಕೃಷ್ಣ, ಕೆ.ಎನ್.ಪ್ರದೀಪ್, ಬಿ.ಕೆ.ನಿಖಿಲ್, ಗೌತಮ್, ಮುರಳಿಧರ್, ಎಸ್.ಮಹೇಶ್ ಬಾಬು, ವೆಂಕಟೇಶ್, ಜಿ.ಪಿ.ಭರತ್, ಜಿ.ಕೆಂಪೇಗೌಡ, ಆರ್.ಪುನೀತ್ ಗೌಡ ಹಾಗೂ ನಿಶ್ಚಲ್ ಇದ್ದರು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮನೋಹರ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಟಿ. ರವಿ, ಜಗದೀಶ್, ವೆಂಕಟೇಶ್ ಮೂರ್ತಿ, ಗೌರೀಶ್, ಚೇತನ್, ಮಂಜುನಾಥ್, ಮುರುಳಿ, ಅಭಿ, ಮನು ಹಾಗೂ ಸೋಮ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-15-1115507667

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.