ಧಾರವಾಡ: ಕಾಸ್ಮೋಸ್ ಕ್ಲಬ್ ಮತ್ತು ಅಭಿಜಿತ್ ಬೆಂಗೇರಿ ಫೌಂಡೇಷನ್ ವತಿಯಿಂದ ಮೇ 24ರಂದು ಮುಕ್ತ ಚೆಸ್ ಟೂರ್ನಿ ನಡೆಯಲಿದೆ ಎಂದು ಫೌಂಡೇಷನ್ ಅಧ್ಯಕ್ಷ ಅಭಿಜಿತ್ ಬೆಂಗೇರಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಸ್ಮೋಸ್ ಕ್ಲಬ್ ಆವರಣದಲ್ಲಿ ಬೆಳಿಗ್ಗೆ 9.30ಕ್ಕೆ ಟೂರ್ನಿ ಉದ್ಘಾಟನೆ ನಡೆಯಲಿದೆ. 9, 12 ಮತ್ತು 15 ವರ್ಷದೊಳಗಿನವರ ವಿಭಾಗ ಮತ್ತು ಮುಕ್ತ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ’ ಎಂದರು.

www.chesscircle.com ವೆಬ್ಸೈಟ್, ಮೊ:7022767354 ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಈವರೆಗೆ 80 ಆಟಗಾರರು ನೋಂದಾಯಿಸಿಕೊಂಡಿದ್ಧಾರೆ. ಗದಗ, ಹಾವೇರಿ, ಬಳ್ಳಾರಿ, ಉತ್ತರ ಕನ್ನಡ, ಬೆಳಗಾವಿ ಸಹಿತ ವಿವಿಧ ಜಿಲ್ಲೆಗಳ ಆಟಗಾರರ ಭಾಗಹಿಸುವರು. 24ರಂದು ಟೂರ್ನಿ ಸ್ಥಳದಲ್ಲೇ ನೋಂದಾಯಿಸಲು ಅವಕಾಶ ಇದೆ. ವಿಜೇತರಿಗೆ ಒಟ್ಫು ₹ 30 ಸಾವಿರ ನಗದು ಬಹುಮಾನ, ಪದಕ ನೀಡಲಾಗುವುದು ಎಂದರು.

ಕಾಸ್ಮೋಸ್ ಕ್ಲಬ್ ಅಧ್ಯಕ್ಷ ನಿತಿನ್ ಟಗರಪುರ, ಉಪಾಧ್ಯಕ್ಷ ಎಚ್.ಎಫ್. ಹೆಬ್ಬಾಳ, ಕಾರ್ಯದರ್ಶಿ ಅಶೋಕ ಹಿರೇಮಠ, ಅಭಿಜಿತ್ ಬೆಂಗೇರಿ ಫೌಂಡೇಷನ್ ಕಾರ್ಯದರ್ಶಿ ವಿಮರ್ಶಾ, ಕೆ.ವಿ. ಶ್ರೀಪಾದ, ಸಂದೀಪ ಸುದ್ದಿಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-24-1585710810

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.