ಧಾರವಾಡ: ‘ಕ್ರೀಡೆಯು ಜೀವನದ ಪಾಠ ಕಲಿಸುತ್ತದೆ. ಅಡೆತಡೆಯಿಲ್ಲದ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದೆ’ ಎಂದು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ನಿವೃತ್ತ ಮುಖ್ಯಸ್ಥ ಬಿ.ಎಂ.ಪಾಟೀಲ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಹಾಗೂ ಕ್ರೀಡಾ ಮಂಟಪ ಈಚೆಗೆ ಹಮ್ಮಿಕೊಂಡ ಮಲ್ಲಕಂಬ ಹಾಗೂ ಸ್ವರಕ್ಷಣಾ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂದಿನ ಮಕ್ಕಳಿಗೆ ಕ್ರೀಡೆ ಬಹಳ ಮುಖ್ಯವಾಗಿದ್ದು, ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಕ್ರೀಡೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ’ ಎಂದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಮಾತನಾಡಿ, ‘ಧಾರವಾಡ ವಿದ್ಯಾಕಾಶಿಯೊಂದಿಗೆ ಕ್ರೀಡಾ ಕಾಶಿಯು ಕೂಡ ಹೌದು. ಇಲ್ಲಿ ಮತಷ್ಟು ಕ್ರೀಡಾಪಟುಗಳನ್ನು ಬೆಳೆಸಿ ಅಂತರರಾಷ್ಟ್ರೀಯಲ್ಲಿ ಮಿಂಚುವಂತೆ ಮಾಡುವ ಅಗತ್ಯವಿದೆ’ ಎಂದು ತಿಳಿಸಿದರು.

ಬಾಲ ಮಾರುತಿ ಜಿಮ್ನಾಸ್ಟಿಕ್ ಸಂಸ್ಥೆಯ ತರಬೇತುದಾರ ವಿಠ್ಠಲ ಮೂರ್ತಗುಡ್ಡೆ, ವಿಶ್ವೇಶ್ವರಿ ಬ. ಹಿರೇಮಠ, ಪ್ರೊ.ಬಸವರಾಜ ತಾಳಿಕೋಟೆ, ಕ್ರೀಡಾಪಟು ಅದಿತಿ ಕ್ಷಾತ್ರತೇಜ ಇದ್ದರು.

ಹುಬ್ಬಳ್ಳಿಯ ಕರ್ನಾಟಕ ಮಲ್ಲಕಂಬ ಅಕಾಡೆಮಿಯ ಮಕ್ಕಳು ಮಲ್ಲಕಂಬ ಹಾಗೂ ಧಾರವಾಡ ಟೆಕ್ವಾಂಡೊ ಕ್ರೀಡಾ ಸಂಸ್ಥೆಯ ಮಕ್ಕಳು ಸ್ವ-ರಕ್ಷಣಾಕುರಿತು ಪ್ರದರ್ಶನ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-24-871976961

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.