ಗೋಕಾಕ: ರಾಹುಲ್ ಟ್ರೋಫಿ - ಸೀಸನ್ 3 ಜಿಲ್ಲಾ ಮತ್ತು ರಾಷ್ಟ್ರ ಮಟ್ಟದ ಹೊನಲು-ಬೆಳಕಿನ ಕ್ರಿಕೆಟ್ ಟೂರ್ನಿಗಳಿಗೆ ಬುಧವಾರ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಹಶೀಲ್ದಾರ್ ಡಾ. ಮೋಹನ ಭಸ್ಮೆ ಚಾಲನೆ ನೀಡಿದರು.

ಬುಧವಾರ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಇಂದಿನಿಂದ ಮೇ 9ರವರೆಗೆ ಜಿಲ್ಲಾ ಮಟ್ಟದ ಮಟ್ಟದ ಪಂದ್ಯಾವಳಿಗಳು ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ 26 ತಂಡಗಳು ಭಾಗವಹಿಸಲಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನ ನಗದು ₹ 1 ಲಕ್ಷ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ನಗದು ₹ 50 ಸಾವಿರ ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು’ ಎಂದರು.

ಮೇ 10ರಿಂದ 14ರವರೆಗೆ ರಾಷ್ಟ್ರ ಮಟ್ಟದ ರಾಹುಲ್ ಟ್ರೋಫಿ ಕ್ರಿಕೆಟ್ ಟೂರ್ನಿ ಜರುಗಲಿದ್ದು, ಈ ಪಂದ್ಯಾವಳಿಯಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳಂ ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟು 16 ತಂಡಗಳು ಭಾಗವಹಿಸಲಿವೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನ ನಗದು ₹ 3 ಲಕ್ಷ, ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ₹ 2 ಲಕ್ಷ ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಎರಡೂ ಪಂದ್ಯಾವಳಿಗಳಲ್ಲಿ ಪಂದ್ಯ ಪುರುಷ, ಪಂದ್ಯಶ್ರೇಷ್ಠ ಸೇರಿದಂತೆ ಅನೇಕ ವೈಯಕ್ತಿಕ ಬಹುಮಾನ ನೀಡಲಾಗುವುದು

ಪಿಎಸ್ಐ ಕಿರಣ ಮೋಹಿತೆ, ಸಂಘಟಕ ರಿಯಾಜ ಚೌಗಲಾ, ಸಂತೋಷ ಭಟ್, ಹನೀಫ್ ಶಾಬಾಶಖಾನ, ಮಂಜುನಾಥ್ ಗಂಗಣ್ಣವರ, ಜುಬೇರ ಮಿರ್ಜಾಬಾಯಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-21-2105558517

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.